ಯುವಜನ

ಕುಂಭಮೇಳದಲ್ಲಿ ಹಲ್ಲುಜ್ಜವ ಬೇವಿನ ಕಡ್ಡಿಯನ್ನು ಮಾರಿ 40 ಸಾವಿರ ಸಂಪಾದಿಸಿದ ಯುವಕ!

Views: 63

ಕನ್ನಡ ಕರಾವಳಿ ಸುದ್ದಿ:  ಬೇವಿನಕಡ್ಡಿಯನ್ನು ಮಾರಿ ಸಾವಿರಾರು ರೂಪಾಯಿ ಗಳಿಸಿದ ಸ್ಟೋರಿಯನ್ನು ಎಲ್ಲಾದರೂ ಕೇಳಿದ್ದೀರಾ? ಅಂತಹದೊಂದು ವಿಚಿತ್ರ ಘಟನೆ ಮಹಾಕುಂಭಮೇಳದಲ್ಲಿ ನಡೆದಿದೆ. ಕೇವಲ ಹಲ್ಲುಜ್ಜಲು ಬೇವಿನ ಕಡ್ಡಿಯನ್ನು ಮಾರಿದ ಯುವಕ ಕೆಲವೇ ದಿನಗಳಲ್ಲಿ ಸುಮಾರು 40 ಸಾವಿರ ರೂಪಾಯಿಗಳನ್ನು ಗಳಿಸಿ ಈಗ ಫೇಮಸ್ ಆಗಿದ್ದಾನೆ.

ಯುವಕ ಬೇವಿನ ಕಡ್ಡಿಯನ್ನು ಮಾರುತ್ತಿರುವ ಹುಡುಗನ ವಿಡಿಯೋ ಈಗ ವೈರಲ್ ಆಗಿದೆ, ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಒಬ್ಬರು ಈತನನ್ನು ಮಾತನಾಡಿಸಿ ಏನು ಮಾರುತ್ತಿದ್ದೀಯಾ ಎಂದು ಕೇಳಿದಾಗ ಬೇವಿನ ಕಡ್ಡಿಯೆಂದು ಹೇಳಿದ್ದಾನೆ. ಎಷ್ಟು ದುಡ್ಡು ಗಳಿಕೆಯಾಗಿದೆ ಎಂದು ಕೇಳಿದಾಗ ಸುಮಾರು 30 ರಿಂದ 40 ಸಾವಿರ ಕೆಲವೇ ದಿನಗಳಲ್ಲಿ ಗಳಿಸಿದ್ದೇನೆ ಎಂದು ವ್ಯಕ್ತಿ ಹೇಳಿದ್ದಾರೆ.

ಇನ್ನೂ ಒಂದು ಅಚ್ಚರಿಯ ವಿಷಯ ಎಂದರೆ ಬೇವಿನಕಡ್ಡಿ ಮಾರುತ್ತಿದ್ದ ಈ ಯುವಕನಿಗೆ ಈ ಐಡಿಯಾ ಕೊಟ್ಟಿದ್ದೇ ಆತನ ಗರ್ಲ್ಫ್ರೆಂಡ್ ಅಂತೆ. ನನ್ನ ಹುಡುಗಿ ನನಗೆ ಏನಾದರೂ ಹೂಡಿಕೆ ಮಾಡಿ ಬ್ಯುಸಿನೆಸ್ ಮಾಡಲು ಹೇಳಿದ್ದಳು. ಹೀಗಾಗಿ ನಾನು ಈ ಕಡ್ಡಿಗಳನ್ನು ಮಾರುತ್ತಿದ್ದೇನೆ. ಅದು ಕೂಡ ನಾನು ಅವುಗಳನ್ನು ಉಚಿತವಾಗಿ ತೆಗೆದುಕೊಂಡು ಬಂದು ಮಾರುತ್ತಿದ್ದೇನೆ ಇದಕ್ಕಾಗಿ ಯಾವುದೇ ಹೂಡಿಕೆಯನ್ನು ಮಾಡಿಲ್ಲ ಎಂದು ಹೇಳಿದ್ದಾನೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸುಮಾರು 80 ಲಕ್ಷ ವೀವ್ಸ್ಗಳನ್ನು ಪಡೆದಿದೆ. ವಿಡಿಯೋ ನೋಡಿದ ನೆಟ್ಟಿಗರು ಯುವಕನಿಗೆ ಹಾಗೂ ಅವನಿಗೆ ಐಡಿಯಾ ಕೊಟ್ಟ ಪ್ರೇಯಸಿಗೆ ಇಬ್ಬರಿಗೂ ಶಹಬ್ಬಾಷ್ ಎನ್ನುತ್ತಿದ್ದಾರೆ. ಅವರಿಗೆ ಗುಡ್ಲಕ್ ವಿಶ್ಗಳನ್ನು ತಿಳಿಸುತ್ತಿದ್ದಾರೆ. ಇದೇ ರೀತಿಯ ಕಾರ್ಯಗಳು ನಿಮ್ಮನ್ನು ಇನ್ನಷ್ಟು ದೊಡ್ಡ ಯಶಸ್ಸಿಗೆ ಕರೆದುಕೊಂಡು ಹೋಗಲಿ ಎಂದು ಹಾರೈಸುತ್ತಿದ್ದಾರೆ.

Related Articles

Back to top button