ಇತರೆ
ಕುಂದಾಪುರ: ಕುಂಭಾಶಿಯಲ್ಲಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ

Views: 172
ಕನ್ನಡ ಕರಾವಳಿ ಸುದ್ದಿ: ವ್ಯಕ್ತಿಯೋರ್ವ ತಮ್ಮದೇ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ಕುಂದಾಪುರ ತಾಲೂಕಿನ ಆನೆಗುಡ್ಡೆ ದೇವಸ್ಥಾನದ ಸಮೀಪ ನಡೆದಿದೆ.
ಬೊಬ್ಬೆ ಕೇಳಿದ ಸ್ಥಳೀಯರು ಕೂಡಲೇ ಕುಂದಾಪುರದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಸುಮಾರು 30 ಅಡಿ ಆಳದ ಬಾವಿಗೆ ಇಳಿದು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದ ಠಾಣಾಧಿಕಾರಿ ವಿ. ಸುಂದರ ನೇತೃತ್ವದಲ್ಲಿ ಕಾಜಾಹುಸೇನ್, ಸಚಿನ್, ರಿಯಾಜ್ ಹಾಗೂ ಸುಂದರ್ ಪಾಲ್ಗೊಂಡಿದ್ದರು.