ಕುಂದಾಪುರದಲ್ಲಿ ಸಂಸಾರ ಸಮೇತ ತೀರ್ಥಯಾತ್ರೆಗೆ ಹೋಗಿದ್ದಾಗ ಮನೆಯಲ್ಲಿ ಕಳ್ಳತನ

Views: 235
ಕನ್ನಡ ಕರಾವಳಿ ಸುದ್ದಿ:ಕುಂದಾಪುರದಲ್ಲಿ ಸಂಸಾರ ಸಮೇತ ತೀರ್ಥಯಾತ್ರೆಗೆ ಹೋಗಿದ್ದಾಗ ಮನೆಯಲ್ಲಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.
ಇಲ್ಲಿನ ಕಸಬಾ ಗ್ರಾಮದ ಪಿ.ರವೀಂದ್ರ ಅವರ ಮನೆಯಲ್ಲಿ ಸುಮಾರು 4,57,000 ಲಕ್ಷ ರೂ. ಮೌಲ್ಯದ ಬೆಳ್ಳಿ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿದೆ.
ಸಂಸಾರ ಸಮೇತ ವಾರಾಣಸಿ ಯಾತ್ರೆಗೆ ಹೋಗುವಾಗ ಮನೆಗೆ ಬೀಗ ಹಾಕಿ ಹೋಗಿದ್ದು, ರವೀಂದ್ರ ಅವರು ಗಯಾದಲ್ಲಿ ಇರುವಾಗ ಸಂಬಂಧಿ ಕಿರಣ ಅವರು ಕರೆ ಮಾಡಿ ಮನೆಯ ಬಾಗಿಲು ತೆರೆದಿರುವುದನ್ನು ಹೇಳಿದರು. ಪ್ರವಾಸವನ್ನು ಅರ್ಧಕ್ಕೆ ಬಿಟ್ಟು ಜುಲೈ 22 ರಂದು ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು. ಯಾರೋ ಕಳ್ಳರು ಯಾವುದೋ ವಸ್ತುವಿನಿಂದ ಮೀಟಿ ತುಂಡರಿಸಿ ಮನೆಯೊಳಗೆ ಪ್ರವೇಶಿಸಿ ಮನೆಯ ಮಲಗುವ ಕೋಣೆಯ ಗೋದ್ರೆಜ್ ಬೀಗವನ್ನು ಒಡೆದು ಸುಮಾರು 9 ಇಂಚಿನ 800 ಗ್ರಾಂನ ಬೆಳ್ಳಿಯ ಹರಿವಾಣ, ಸುಮಾರು 6 ಇಂಚಿನ 600 ಗ್ರಾಂನ ಬೆಳ್ಳಿಯ ಹರಿವಾಣ, ಸುಮಾರು 4 ಇಂಚಿನ 600 ಗ್ರಾಂನ ಬೆಳ್ಳಿಯ 2 ಹರಿವಾಣ, 22 ಗ್ರಾಂ ತೂಕದ ಚಿನ್ನದ 7 ವಜ್ರದ ಹರಳಿನ ಬೆಂಡೋಲೆ, ನಗದು 47,500 ರೂ. ಸಹಿತ ಒಟ್ಟು 4,57,000 ಲಕ್ಷ ರೂ. ಬೆಳ್ಳಿ ಚಿನ್ನದ ಆಭರಣ ಕಳವು ಮಾಡಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






