ಕುಂದಾಪುರದಲ್ಲಿ ಮುಂಗಾರು ಮಳೆ ಅಬ್ಬರ: ಹಲವೆಡೆ ಮನೆ ಮೇಲೆ ಮರ ಬಿದ್ದು ಹಾನಿ

Views: 86
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನಾದ್ಯಂತ ಶನಿವಾರ ಭಾರೀ ಮಳೆ ಗಾಳಿಯಿಂದಾಗಿ ಹಲವು ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
ಕುಂದಾಪುರ ತಾಲೂಕಿನ ಕೊರ್ಗಿ ಆರತಿ ಎಸ್ ಹೆಗ್ಡೆ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ.
ಬೇಳೂರು ಗುಳ್ಳಾಡಿಯ ಜಯಂತಿ ಶೆಡ್ತಿ ಅವರು ಮನೆಯ ಮೇಲೆ ಮರ ಬಿದ್ದು ನಷ್ಟ ಸಂಭವಿಸಿದೆ.
ವಕ್ವಾಡಿ ಶ್ಯಾಮಲ ಸುಕುಮಾರ್ ಪೂಜಾರಿ ಅವರ ಮನೆ ಮೇಲೆ ಅಡಿಕೆ ಮರ ಬಿದ್ದು ನಷ್ಟ ಉಂಟಾಗಿದೆ.
ಕರ್ಕುಂಜೆಯಲ್ಲಿ ಆಸ್ಮಾ ಅವರ ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿಯಾಗಿದೆ.
ಪಾಂಡೇಶ್ವರ ಮುತ್ತಕ್ಕ ಪೂಜಾರ್ತಿ ಅವರ ಮನೆ ಮೇಲೆ ಮರ ಬಿದ್ದಿದೆ.
ಕೋಟ ಸಾಸ್ತಾನ ಸಾಹೇಬರಕಟ್ಟೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದಿದೆ.ಕುಂದಾಪುರ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದ್ದು ಜನರು ಹೈರಾಣಾಗಿದ್ದಾರೆ.
ಹೊಂಬಾಡಿ ಮಂಡಾಡಿ ವಿಶ್ವನಾಥ್ ಕುಲಾಲ್ ಅವರ ಮನೆ ಮೇಲೆ ಮರ ಬಿದ್ದಿದೆ.
ಮೊಳಹಳ್ಳಿ ವಿಶ್ವನಾಥ್ ಶೆಟ್ಟಿ ಅವರ ಮನೆ ಹಲಸಿನ ಮರ ಮತ್ತು ಅಡಿಕೆ ಮರ ಬಿದ್ದು ಹಾನಿಯಾಗಿದೆ.
ಶನಿವಾರ ಕುಂದಾಪುರ ಬೆಳಿಗ್ಗೆಯಿಂದಲೇ ಗಾಳಿ ಮಳೆ ಗುಡುಗು ಸಹಿತ ಮಳೆಯಾಗಿದೆ.






