ಜನಮನ
ಕುಂದಾಪುರದಲ್ಲಿ ಮತದಾನ ಜಾಗೃತಿ ಅಭಿಯಾನ

Views: 0
ಕುಂದಾಪುರ : ಡಾ. ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ, ಭಂಡಾರ್ಕಾರ್ಸ್ ಕಾಲೇಜು, ಜೆಸಿಐ ಕುಂದಾಪುರದ ಇವರ ಆಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಯಿತು.
ಮತದಾನ ಪವಿತ್ರ ಕಾಯ೯, ಯಾವುದೇ ಒತ್ತಡ, ಭಯ ಅಮಿಷಗಳಿಗೆ ಬಲಿಯಾಗದೇ ಮತವನ್ನು ಚಲಾಯಿಸಬೇಕು, ‘ ನಮ್ಮ ಮತ ನಮ್ಮ ಹಕ್ಕು’ ಆತ್ಮ ಸಾಕ್ಷಿಗೆ ಅನುಗುಣವಾಗಿ ನಾವು ಮತದಾನ ಮಾಡುವುದರೊಂದಿಗೆ ನೆರೆಹೊರೆಯವರು ಮತದಾನ ಮಾಡುವಂತೆ ಪ್ರೆರೇಪಿಸಬೇಕು ಎಂದು ಜಾಥಾದಲ್ಲಿ ನಿರತರಾದ ಕಾಯ೯ಕತ೯ರು ಕುಂದಾಪುರ ಬಸ್ ನಿಲ್ದಾಣದಿಂದ ಶಾಸ್ತ್ರಿ ವೃತ್ತದ ವರೆಗೆ ಮೆರವಣಿಗೆಯಲ್ಲಿ ಸಾಗಿ ಮತದಾನ ಜಾಗೃತಿ ಮೂಡಿಸಿದರು.