ಉಳ್ತೂರು: 10 ದಿನಗಳ ಕಾಲ ಬ್ಯುಟಿಷೀಯನ್ ತರಬೇತಿ
Views: 281
ಕನ್ನಡ ಕರಾವಳಿ ಸುದ್ದಿ: ನೋಮಿ ನೆಟ್ವರ್ಕ್ ಮಣಿಪಾಲ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ರೋಟರಿ ಕ್ಲಬ್ ತೆಕ್ಕಟ್ಟೆ, ಎನ್ ಆರ್ ಎಲ್ ಎಂ ಸಮೃದ್ಧಿ ಸಂಜೀವಿನಿ ಒಕ್ಕೂಟದ ಇವರ ಸಹಯೋಗದಲ್ಲಿ ಶ್ರೀ ಮಹಾಲಿಂಗೇಶ್ವರ ಸಭಾಭವನ ಉಳ್ತೂರಿನಲ್ಲಿ 10 ದಿನಗಳ ಕಾಲ ಬ್ಯುಟಿಷೀಯನ್ ತರಬೇತಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಕೆದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಅವರು ಗಿಡಕ್ಕೆ ನೀರುಣಿಸುವ ಮೂಲಕ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ತೆಕ್ಕಟ್ಟೆ ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀ ಸುಧೀರ್ ಮಲ್ಯಾಡಿ ಅವರು,ಬಿವಿಟಿ ಮಣಿಪಾಲದ ಶ್ರೀ ರಾಘವೇಂದ್ರ ಆಚಾರ್ಯ ಕೆದೂರು, ತರಬೇತುದಾರ ಶೈನಾ ಮೊನಿಸ್ ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸುಮತಿ.ಜೆ ಅವರು ಶುಭಹಾರೈಸಿದರು.
ಪಾರ್ವತಿ ಪ್ರಾರ್ಥಿಸಿ, ಅಮೃತ ಸ್ವಾಗತಿಸಿ, ಶಾಂತಿ ವಂದಿಸಿ ಇಂದಿರಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 30 ಜನ ಸ್ವ ಸಹಾಯ ಸಂಘಗಳ ಸದಸ್ಯರು ತರಬೇತಿ ಪ್ರಯೋಜನ ಪಡೆಯಲು ಆಗಮಿಸಿದ್ದರು.






