ಆರ್ಥಿಕ
ಕರ್ನಾಟಕಕ್ಕೆ ₹348 ಕೋಟಿ ವಿಕೋಪ ಸ್ಪಂದನೆ ನಿಧಿ ಬಿಡುಗಡೆ

Views: 8
ಮಳೆಯಿಂದ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದ ಹಣಕಾಸು ವರ್ಷಗಳಲ್ಲಿ ಬಿಡುಗಡೆಯಾದ ಹಣ ಬಳಕೆಯ ಪ್ರಮಾಣ ಪತ್ರಕ್ಕೆ ಕಾಯದೆ ಮಾರ್ಗಸೂಚಿಯಲ್ಲಿ ವಿನಾಯಿತಿ ನೀಡಿ 22 ರಾಜ್ಯಗಳಿಗೆ ₹7,532 ಕೋಟಿ ಮೊತ್ತದ ರಾಜ್ಯ ವಿಕೋಪ ಸ್ಪಂದನೆ ನಿಧಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.
ಕರ್ನಾಟಕಕ್ಕೆ₹ 340 ಕೋಟಿ, ಮಹಾರಾಷ್ಟ್ರಕ್ಕೆ ₹1,420 ಕೋಟಿ, ಉತ್ತರ ಪ್ರದೇಶಕ್ಕೆ₹ 812 ಕೋಟಿ ಒಡಿಸ್ಸಾ ₹707 ಕೋಟಿ, ಬಿಹಾರಕ್ಕೆ ₹624 ಕೋಟಿ,ಆಂಧ್ರಕ್ಕೆ ₹493 ಕೋಟಿ ನೀಡಲಾಗಿದೆ.
ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಪ್ರತಿ ರಾಜ್ಯದಲ್ಲಿ ರಾಜ್ಯ ವಿಕೋಪ ಸ್ಪಂದನೆ ನಿಧಿ ಸ್ಥಾಪಿಸಲಾಗಿದೆ ವಿಪತ್ತುಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಈ ಹಣವನ್ನು ಬಳಸಬಹುದಾಗಿದೆ ಎಂದು ಹಣಕಾಸಿನ ಸಚಿವಾಲಯ ತಿಳಿಸಿದೆ.