ಕೃಷಿ

ಉಡುಪಿಯಲ್ಲಿ ಮುಗಿಲು ಮುಟ್ಟಿದ ಹಣ್ಣು, ತರಕಾರಿ, ಬೇಳೆ ಕಾಳುಗಳ ಬೆಲೆ: ಗ್ರಾಹಕರ ಕಂಗಾಲು

Views: 0

ಉಡುಪಿ: ರಾಜ್ಯದ ಎಲ್ಲಾ ಕಡೆಗಳಂತೆ ಉಡುಪಿಯಲ್ಲೂ ಹಣ್ಣು ತರಕಾರಿಗಳ ಬೆಲೆ ಗಗನಕ್ಕೇರಿದರೆ, ಬೇಳೆಕಾಳುಗಳ ದರವು ತುಟ್ಟಿಯಾಗಿ ಗ್ರಾಹಕರಿಗೆ ಅದರ ಬಿಸಿ ತಟ್ಟಿದೆ. ಟೊಮೊಟೊ ಕ್ಯಾರೆಟ್ ನಂತಹ ತರಕಾರಿಗಳ ಬೆಲೆ ನೂರರ ಗಡಿ ದಾಟಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುವ ಚಿಕ್ಕಮಗಳೂರಿನಿಂದ ಮಿಕ್ಕಂತೆ ದಾವಣಗೆರೆ,ಕೋಲಾರ,ಶಿವಮೊಗ್ಗ, ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಂದಲೂ ಜಿಲ್ಲೆಗೆ ಟೊಮೆಟೊ ಸರಬರಾಜಾಗುತ್ತದೆ.

ಪ್ರಸ್ತುತ ರಾಜ್ಯದಿಂದ ಹೊರ ರಾಜ್ಯಗಳಿಗೆ ಗಣನೀಯ ಪ್ರಮಾಣದಲ್ಲಿ ಟೊಮೆಟೊ ರವಾನೆಯಾಗುತ್ತಿರುವುದರಿಂದ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಪೂರೈಕೆಯಾಗದೆ ಉಡುಪಿಯಲ್ಲಿ ಟಮೋಟೋ ಬೆಲೆ ಹೆಚ್ಚಾಗಿದೆ.

ಹೀಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ 90 ರಿಂದ 110 ರೂ.ವರೆಗೆ ಟೊಮೆಟೊ ಮಾರಾಟವಾಗುತ್ತಿದೆ. ಇದೇ ರೀತಿಯಲ್ಲಿ ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಹುರುಳಿ ಕಾಯಿಗಳ ಬೆಲೆಗಳು ಕ್ರಮವಾಗಿ 100 ರೂ. 70 ರೂ.ಮತ್ತು 110 .ರೂಗಳಿಗೆ ಮುಟ್ಟಿದೆ.

ಹಣ್ಣುಗಳ ಪೈಕಿ ಸೇಬಿಗೆ 250 ರೂ.ರಿಂದ 300 ರೂ.ಗೆ ಹೆಚ್ಚಿದರೆ. ಉದ್ದಿನ ಬೇಳೆ 100ರಿಂದ 130 ವರೆಗೆ,ಅಲಸಂಡೆ 100 ರಿಂದ 120 ಗೆ, ಜೀರಿಗೆ 300 ರಿಂದ 600 ರೂಪಾಯಿ ಹೆಚ್ಚಳವಾಗಿದ್ದು ಇದರಿಂದ ಗ್ರಾಹಕರು ಕಂಗಲಾಗಿದ್ದಾರೆ.

Related Articles

Back to top button