ಇತರೆ
ಆನೆಗುಡ್ಡೆ ದೇವಳದ ಕಛೇರಿ ನಿರ್ವಾಹಕ ನಾಗರಾಜ ಉಪಾಧ್ಯಾಯ ನಿಧನ

Views: 110
ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಛೇರಿ ನಿರ್ವಾಹಕರಾಗಿದ್ದ ಶ್ರೀ ನಾಗರಾಜ ಉಪಾಧ್ಯಾಯರು ಫೆ.1ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಕಳೆದ 25 ವರ್ಷಗಳಿಂದ ಕಾರ್ಯ ನಿರ್ವಹಸುತ್ತಿದ್ದ ಶ್ರೀಯುತ ನಾಗರಾಜ ಉಪಾಧ್ಯಾಯರು ದೇವಳದ ಆನುವಂಶಿಕ ಅರ್ಚಕರೂ ಕೂಡಾ ಆಗಿದ್ದು ಎರಡೂ ವಿಭಾಗದಲ್ಲಿ ಉತ್ತಮ ಸೇವಸಲ್ಲಿಸಿದ್ದಾರೆ.
ಮೃತರ ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂದು ಬಳಗದವರವನ್ನು ಅಗಲಿದ್ದಾರೆ. ಎಲ್ಲಾ ಭಕ್ತರೊಂದಗೆ ಅತ್ಯಂತ ನಗು ಮುಖದ ಹಾಗೂ ವಿನಮ್ರತೆಯ ಸೇವೆಯನ್ನು ಸಲ್ಲಿಸುತ್ತಿದ್ದು ಸ್ನೇಹಜೀವಿಯಾಗಿದ್ದರು.ಅವರ ನಿಧನಕ್ಕೆ ಆಡಳಿತ ಮಂಡಳಿಯು ಶ್ರದ್ಧಾಂಜಲಿಯನ್ನು ತಿಳಿಸಿದೆ.