ಆತ್ಮೀಯ ಗೆಳತಿಯನ್ನೇ ಮದುವೆಯಾದ ನಟಿ !

Views: 243
ಕನ್ನಡ ಕರಾವಳಿ ಸುದ್ದಿ: ಮಾಡೆಲ್ ಅನ್ಸಿಯಾ ತನ್ನ ಆತ್ಮೀಯ ಸ್ನೇಹಿತೆ ಮತ್ತು ಜನಪ್ರಿಯ ಮಲಯಾಳಂ ಧಾರಾವಾಹಿ ಸ್ಟಾರ್ ಪ್ರಾರ್ಥನಾ ಅವರನ್ನು ಮದುವೆ ಆಗಿದ್ದಾರೆ.ಈ ಜೋಡಿಯ ಮದುವೆಯ ಫೋಟೋಗಳು ಕೇರಳದ ಜನರಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿವೆ.ಇಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ‘ಕೂಡೆವಿಡೆ’ ಧಾರಾವಾಹಿಯ ಮೂಲಕ ಖ್ಯಾತಿಗಳಿಸಿದ ಪ್ರಾರ್ಥನಾ ಅವರ ಅನ್ಸಿಯಾ ಮದುವೆಯಾದ ಫೋಟೋಗಳು, ದೇವಸ್ಥಾನದ ಮುಂಭಾಗದಲ್ಲಿ ಒಬ್ಬರಿಗೊಬ್ಬರು ಹಾರ ಹಾಕುವ ದೃಶ್ಯಗಳು ಸಂಚಲನ ಮೂಡಿಸಿವೆ.
ವಿಡಿಯೊದಲ್ಲಿ, ಇಬ್ಬರೂ ಒಬ್ಬರಿಗೊಬ್ಬರು ಮಾಂಗಲ್ಯ ಧಾರಣೆ ಮಾಡಿ, ಹಾರ ಹಾಕಿಕೊಳ್ಳುವ ಕ್ಷಣಗಳು ವಿಡಿಯೋದಲ್ಲಿ ಸೆರೆಯಾಗಿದೆ. “ನಾನು ನನ್ನ ಆತ್ಮೀಯ ಸ್ನೇಹಿತೆಯನ್ನು ಮದುವೆಯಾದೆ. ಇದು ಟಾಕ್ಸಿಕ್ ಸಂಬಂಧಕ್ಕಿಂತ ನೂರು ಪಟ್ಟು ಸುಂದರವಾದ ಸಂಬಂಧವಾಗಿದೆ” ಎಂದು ಪ್ರಾರ್ಥನಾ ಬರೆದುಕೊಂಡಿದ್ದಾರೆ.
ಮದುವೆಯ ಫೋಟೋಗಳು ಮತ್ತು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಅನ್ಸಿಯಾ ಮತ್ತು ಪ್ರಾರ್ಥನಾರ ಈ ಮದುವೆಯು, ಸಾಂಪ್ರದಾಯಿಕ ಮದುವೆಯ ಚೌಕಟ್ಟಿನಿಂದ ಹೊರಗಿರುವ ಸಂಬಂಧವಾಗಿದ್ದು, ಅನೇಕರ ಗಮನ ಸೆಳೆದಿದೆ. ಕೆಲವು ಅಭಿಮಾನಿಗಳು ಈ ಜೋಡಿಗೆ ಶುಭ ಕೋರಿದರೆ, ಕೆಲವರು ಇದರ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಪ್ರಾರ್ಥನಾ, ಮಲಯಾಳಂ ಧಾರಾವಾಹಿಗಳಲ್ಲಿ ತನ್ನ ನಟನೆಯಿಂದ ಗುರುತಿಸಿಕೊಂಡವರು. ಅನ್ಸಿಯಾ ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ.