ಇತರೆ

ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನ ಕೊಲೆ: ಮಾಲಕನ ಬಂಧನ

Views: 0

ಮಂಗಳೂರು: ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಳಿ ಹಿತ್ಲುವಿನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕನನ್ನು ಕೊಲೆ ಮಾಡಲಾಗಿದೆ.                                     ಜಗ್ಗು (35 )ಕೊಲೆಯಾದ ಯುವಕ

ಅಂಗಡಿಯ ಮಾಲಕ ತೌಸಿಫ್ ಹುಸೇನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ತನ್ನ ಅಂಗಡಿಯಲ್ಲಿ ಕೆಲಸಕ್ಕೆ ಇದ್ದ ಯುವಕನನ್ನು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಅಂಗಡಿಗೆ ಬೆಂಕಿ ಕೊಟ್ಟು ನಂತರ ಸಾಕ್ಷಿ ನಾಶ ಮಾಡುವ ಹಾಗೂ ತಾನು ತಪ್ಪಿಸಿಕೊಳ್ಳುವ ನಾಟಕವಾಡಿ ಸುತ್ತಮುತ್ತಲಿನ ಜನರಿಗೆ ವಿದ್ಯುತ್ ಸ್ಪರ್ಶದಿಂದ ಬೆಂಕಿಗೆ ಆಹುತಿಯಾಗಿ ಸಾವನಪ್ಪಿದ್ದಾನೆ ಎಂದು ಅಂಗಡಿ ಮಾಲಕ ಹೇಳಿದ್ದಾನೆ.

ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡ ನಂತರ ಈ ಪರಿಸರದ ಸಾರ್ವಜನಿಕರು ಅಂಗಡಿ ಮಾಲೀಕನೆ ಕೊಲೆ ಮಾಡಿದ್ದರ ಬಗ್ಗೆ ಮಾಹಿತಿ ನೀಡಿದ್ದರಿಂದ ಆರೋಪಿ ತೌಸಿಫ್ ಹುಸೈನ್ ನನ್ನು ಬಂಧಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Related Articles

Back to top button