ಕೊಡಗಿನ ತಲಕಾವೇರಿಯಲ್ಲಿ ನಾಡಿನ ಜೀವನದಿ ಕಾವೇರಿ ತೀರ್ಥೋದ್ಭವ

Views: 2
ಕಾವೇರಿ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ತಡ ರಾತ್ರಿ ಭಕ್ತರು ಸಂತಸಕ್ಕೆ ಪಾರವೇ ಇರಲಿಲ್ಲ.ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಕೊಡಗಿನ ಆರಾಧ್ಯ ದೇವತೆ, ನಾಡಿನ ಜೀವನದಿ ಕಾವೇರಿ ನದಿ ಉಗಮಸ್ಥಾನವಾದ ತಲಕಾವೇರಿಯಲ್ಲಿ ತೀರ್ಥೋದ್ಭವ ಮಧ್ಯರಾತ್ರಿ 1.26ಕ್ಕೆ ಕರ್ಕಾಟಕ ಲಗ್ನದಲ್ಲಿ ಜರುಗಿತು.
ಪೂರ್ವ ನಿಗದಿತ ಸಮಯವಾದ 1.27 ಕ್ಕೆ ಒಂದು ನಿಮಿಷ ಮುಂಚಿತವಾಗಿ ಕಾವೇರಿಯಲ್ಲಿ ತೀರ್ಥೋದ್ಭವ ನಡೆಯಿತು.

ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಮಧ್ಯರಾತ್ರಿ ಭಕ್ತರು ತೀರ್ಥರೂಪಿಣಿ ಕಾವೇರಿಯ ದರ್ಶನ ಪಡೆದು ಸಂಭ್ರಮಪಟ್ಟರು.
ರಾಜ್ಯಾದ್ಯಂತ ಮತ್ತು ಹೊರ ರಾಜ್ಯದಿಂದಲೂ ಕೂಡ ಸಾವಿರಾರು ಮಂದಿ ಆಗಮಿಸಿ ತೀರ್ಥೋದ್ಭವದ ಕ್ಷಣವನ್ನು ಕಣ್ತುಂಬಿಕೊಂಡು ಧನ್ಯರಾದರು.
ತೀರ್ಥೋದ್ಭವದ ಆಗುತ್ತಿದ್ದಂತೆ ಅರ್ಚಕರ ತಂಡ ಬ್ರಹ್ಮ ಕುಂಡಿಕೆಯಿಂದ ತೀರ್ಥವನ್ನು ಭಕ್ತ ವೃಂದ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿದ್ದಾಗ ಭಕ್ತರೆಲ್ಲರೂ ಜಯಘೋಷ ಮುಗಿಲು ಮುಟ್ಟಿತ್ತು.ತಲಕಾವೇರಿ ತೀರ್ಥೋದ್ಭವದ ಬಗ್ಗೆ ಬಹಳ ಪವಿತ್ರವಾದ ನಂಬಿಕೆ ದೇಶದಾದ್ಯಂತ ಚಾಲ್ತಿಯಲ್ಲಿದೆ. ಕಾವೇರಿ ತೀರ್ಥೋದ್ಭವದ ನೀರು ಕುಡಿದರೆ ರೋಗರುಜಿನ ಬಾಧೆಸುವುದಿಲ್ಲ ಎಂಬ ನಂಬಿಕೆಯೂ ತಲೆತಲಾಂತರದಿಂದ ಭಕ್ತರಲ್ಲಿದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡು ಭಕ್ತರಿಗೆ ದರ್ಶನ ನೀಡುತ್ತಾಳೆ.
ಭಾಗಮಂಡಲದಿಂದ 8 ಕಿ.ಮೀ ದೂರದ ತಲಕಾವೇರಿಗೆ ಪಾದಯಾತ್ರೆ ಮೂಲಕ ಸಾವಿರಾರು ಭಕ್ತರು ಆಗಮಿಸಿ ಕಾವೇರಿ ತೀರ್ಥೋದ್ಭವ ವೀಕ್ಷಿಸಿದರು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಭಕ್ತರು ತಲಕಾವೇರಿಗೆ ಆಗಮಿಸಿ ಮಾತೆ ಕಾವೇರಿಗೆ ಪೂಜೆ ಸಲ್ಲಿಸಿದರು.
ತೀರ್ಥೋದ್ಭವದಲ್ಲಿ ಮಡಿಕೇರಿ ಶಾಸಕ ಮಂತರ್ ಗೌಡ, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಭಾಗವಹಿಸಿದ್ದರು.ಬಿಗಿಯಾದ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.






