ಯುವಜನ

ಮೊಬೈಲ್ ಟವರ್ ಏರಿ ಹೈಡ್ರಾಮಾ: ಪ್ರೇಮಿಯೊಂದಿಗೆ ಆನ್‍ಲೈನ್‍ನಲ್ಲಿ ಮದುವೆಯಾದ ಯುವತಿ

Views: 0

ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಬಹ್ರಾಯಿಚ್ ಜಿಲ್ಲೆಯಲ್ಲಿ ಪ್ರೇಮಿಯೊಂದಿಗೆ ಮದುವೆ ಮಾಡಿಕೊಳ್ಳಲು ಪಟ್ಟು ಹಿಡಿದು ಯುವತಿಯೊಬ್ಬಳು ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿರುವ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ವರದಿಯಾಗಿದೆ.

ಬಹ್ರಾಯಿಚ್‍ನ ಮೋತಿಪುರ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, 18 ವರ್ಷದ ಸಾಹಿಬಾ ಬೇಗಮ್ ಅಲಿಯಾಸ್ ಮಹಕ್ ಎಂಬ ಯುವತಿ ತನ್ನ ಪ್ರೇಮಿ ಫಕ್ರುದ್ದೀನ್ ಅಲಿಯಾಸ್ ನೂರುದ್ದೀನ್ ಜೊತೆ ಮದುವೆ ನಿರಾಕರಿಸಿದ ಕುಟುಂಬದವರ ವಿರೋಧದ ನಡುವೆಯೂ ಮೊಬೈಲ್ ಟವರ್ ಏರಿ ಕುಳಿತಿದ್ದಾಳೆ. ಮೂಲಗಳ ಪ್ರಕಾರ, ಇಬ್ಬರ ನಡುವೆ ಕಳೆದ ಐದು ತಿಂಗಳಿಂದ ಪ್ರೇಮ ಸಂಬಂಧವಿತ್ತು. ಆದರೆ ಇವರ ಮದುವೆಗೆ ಯುವತಿಯ ಮನೆಯವರಿಂದ ತೀವ್ರ ವಿರೋಧವಿತ್ತು ಹಾಗೂ ಎರಡು ತಿಂಗಳ ಹಿಂದಷ್ಟೇ ಯುವಕ ಮುಂಬೈಗೆ ಉದ್ಯೋಗ ಅರಸಿ ತೆರಳಿದ್ದನು. ಶುಕ್ರವಾರದಂದು ಯುವತಿ ತನ್ನ ತಾಯಿಯೊಂದಿಗೆ ಮದುವೆ ವಿಚಾರವಾಗಿ ಜಗಳವಾಡಿದ್ದು, ಕೋಪಗೊಂಡು ನೇರವಾಗಿ ಗ್ರಾಮದಲ್ಲಿರುವ ಮೊಬೈಲ್ ಟವರ್ ಅನ್ನು ಏರಿದ್ದಾಳೆ. ಟವರ್ ಮೇಲಿಂದಲೇ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಪ್ರೇಮಿ ನೂರುದ್ದೀನ್ ಜೊತೆ ತಕ್ಷಣವೇ ತನ್ನ ಮದುವೆ ಮಾಡಿಸುವಂತೆ ಪಟ್ಟು ಹಿಡಿದಳು.

ಈ ಸುಮಾರು ಮೂರು ಗಂಟೆಗಳ ಕಾಲ ನಡೆದ ಹೈಡ್ರಾಮಾದಿಂದ ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಜಮಾಯಿಸಿ ಆತಂಕಗೊಂಡರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಮತ್ತು ಪೆÇಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರು.

ಯುವತಿ ಮಾತ್ರ ತನ್ನ ಪಟ್ಟು ಸಡಿಲಿಸದ ಕಾರಣ, ಕೊನೆಗೆ ಸ್ಥಳೀಯ ಕಾಜಿಯವರನ್ನು (ಧರ್ಮಗುರು) ಕರೆಸಲಾಯಿತು. ಕಾಜಿಯವರು ಮುಂಬೈಯಲ್ಲಿದ್ದ ಯುವಕನಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಮದುವೆಗೆ ಒಪ್ಪಿಗೆ ಪಡೆದರು. ಬಳಿಕ ಫೆÇೀನ್ ಕಾಲ್ ಮೂಲಕವೇ ಸಾಕ್ಷಿಗಳ ಸಮ್ಮುಖದಲ್ಲಿ ಇಬ್ಬರಿಗೂ ಆನ್‍ಲೈನ್ ನಿಕಾಹ್ (ಮದುವೆ) ನೆರವೇರಿಸಲಾಯಿತು. ತನಗೆ ಮದುವೆಯಾಗಿದೆ ಎಂದು ಖಚಿತಗೊಂಡ ಬಳಿಕವೇ ಯುವತಿ ಸಮಾಧಾನಗೊಂಡು ಟವರ್‍ನಿಂದ ಕೆಳಗೆ ಇಳಿದುಬಂದಳು.

ಈ ವಿಭಿನ್ನ ಮದುವೆಯ ಸುದ್ದಿಯು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಮೋತಿಪುರ ಠಾಣಾ ಪೆÇಲೀಸರು ಯುವತಿ ಹಾಗೂ ಆಕೆಯ ತಾಯಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ.

Related Articles

Back to top button
error: Content is protected !!