ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು: ಅರಿವಿನ ಬೆಳಕು ಉಪನ್ಯಾಸ ಮಾಲೆ- ೧೭” ರ ಉಪನ್ಯಾಸ ಕಾರ್ಯಕ್ರಮ
Views: 21
ಕನ್ನಡ ಕರಾವಳಿ ಸುದ್ದಿ: ಸಮಾಜದ ಏಳು ಬೀಳಿನ ಕಥನವನ್ನು ಹೇಳಿ ಆರೋಗ್ಯಪೂರ್ಣ ಸಮಾಜ ಕಟ್ಟುವ ಸೃಜನಶೀಲತೆಯೇ ಸಾಹಿತ್ಯ. ಬದುಕಿನ ಕಥೆಯನ್ನು ಹೇಳಿ ಮಾನವೀಯ ಮೌಲ್ಯಗಳ ಪುನರುತ್ಥಾನದೊಂದಿಗೆ ಸುಸಂಸ್ಕೃತ ಸಮಾಜ ರಚನೆಯ ಹಂಬಲ ಸಾಹಿತಿಯದ್ದಾಗಿದೆ. ಕಾರಂತರು ಈ ನಿಟ್ಟಿನಲ್ಲಿ ಸಾಹಿತ್ಯ ಕೃಷಿ ಮಾಡಿದ್ದು ಆ ಕಾಲದ ವಿಶಿಷ್ಟತೆಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕದ ಕನ್ನಡ ಉಪನ್ಯಾಸಕಿ ಶಾಲಿನಿ ಯು.ಬಿ. ಹೇಳಿದರು.
ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಕೋಟೇಶ್ವರ ಇಲ್ಲಿ ಕಾರಂತ ಟ್ರಸ್ಟ್ ಉಡುಪಿ, ಕಾಲೇಜಿನ ಕನ್ನಡ ಸಂಘ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ “ಅರಿವಿನ ಬೆಳಕು ಉಪನ್ಯಾಸ ಮಾಲೆ – ೧೭” ರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಟ್ರಸ್ಟ್ನ ಉದ್ದೇಶ ಮತ್ತು ನಿಲುವುಗಳನ್ನು ಹೇಳಿ ಓದಿನಿಂದ ಭೌದ್ಧಿಕ ವಿಕಸನ ಸಾಧ್ಯವಾಗಿ ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ ಎಂದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಎ. ಕಾರ್ಯಕ್ರಮ ಉದ್ಘಾಟಿಸಿದರು. ಪಾಲ್ಗುಣಿ ಮತ್ತು ತಂಡ ಪ್ರಾರ್ಥಿಸಿ, ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ರಂಜಿತ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಪ್ರೇಮಲಾಕ್ಷಿ ನಿರೂಪಿಸಿದರು. ಭಾರತಿ ವಂದಿಸಿದರು.






