ಜನಮನ
ಮೆದುಳು ಜ್ವರದಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯ ಚಿಕಿತ್ಸೆಗೆ ಮಾನವೀಯ ನೆರವಿಗಾಗಿ ಮನವಿ
Views: 0
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ನಿವಾಸಿ ಶ್ರೀಮತಿ ಅಶ್ವಿನಿ ಮತ್ತು ಶ್ರೀನಿವಾಸ್ ಶೆಟ್ಟಿಗಾರರ ಪುತ್ರ ತುಮಕೂರು ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಪ್ರಜ್ವಲ್ ಶೆಟ್ಟಿಗಾರ್ ಅವರು ಕಳೆದ ಒಂದು ತಿಂಗಳಿಂದ ಮೆದುಳು ಜ್ವರದಿಂದ ಬಳಲುತ್ತಿದ್ದು ಇವರಿಗೆ 7ರಿಂದ8 ಲಕ್ಷದವರೆಗೆ ಖರ್ಚಾಗಿದ್ದು, ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತಿದ್ದು, ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಂದೆ ತಾಯಿ ದಿನ ಕೂಲಿ ನೌಕರರಾಗಿದ್ದು, ಬರ ಸಿಡಿಲಿನಂತೆ ಬಂದಿರುವ ಅನಾರೋಗ್ಯ ಸಮಸ್ಯೆಗೆ ದಿಕ್ಕು ತೋಚದೆ ಕಂಗಲಾಗಿದ್ದಾರೆ. ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಲಕ್ಷಾಂತರ ರೂಪಾಯಿ ಖರ್ಚು ಬರಿಸಲು ಕಷ್ಟ ಸಾಧ್ಯವಾಗಿದ್ದು, ಸಹೃದಯಿಗಳಾದ ತಾವು ಅಮೂಲ್ಯವಾದ ಜೀವ ಉಳಿಸಲು ಮಾನವೀಯ ನೆಲೆಯಲ್ಲಿ ನೆರವು ನೀಡುವರೇ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ. ದಯವಿಟ್ಟು ಸಹಾಯ ಮಾಡುವ ಮನಸ್ಕರಿಗೆ ನಮ್ಮ ಸಂದೇಶವನ್ನು ಕಳಿಸಿ, ಚಿಕಿತ್ಸೆಗೆ ನೆರೆವಾಗಿ…
——–ಶ್ರೀಮತಿ ಅಶ್ವಿನಿ ಶ್ರೀನಿವಾಸ ಶೆಟ್ಟಿಗಾರ್ ಜಪ್ತಿ
ಬ್ಯಾಂಕ್ ವಿವರಗಳು
ಖಾತೆದಾರರ ಹೆಸರು: ಅಶ್ವಿನಿ(ತಾಯಿ)







