ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ
Views: 5
ಕನ್ನಡ ಕರಾವಳಿ ಸುದ್ದಿ: ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಕಾರ್ಗಿಲ್ ವಿಜಯೋತ್ಸವದ ದಿನಾಚರಣೆಯನ್ನು ಶಾಲಾ ಎನ್ ಸಿ ಸಿ ಘಟಕದ ವತಿಯಿಂದ ಜುಲೈ 27ರಂದು ಸಂಭ್ರಮದಿಂದ ಆಚರಿಸಲಾಯಿತು.
1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶದ ಹಿತ ರಕ್ಷಣೆಗಾಗಿ ಹೋರಾಡಿದ ವೀರ ಯೋಧರ ತ್ಯಾಗ ಬಲಿದಾನವನ್ನು ಸ್ಮರಿಸಿ ಗೌರವಿಸುವ ಉದ್ದೇಶದಿಂದ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ರವರು ಚಾಲನೆ ನೀಡಿ ಮಾತಾನಾಡುತ್ತಾ – ರಾಷ್ಟ್ರದ ರಕ್ಷಣೆಗೆ ಪಣತೊಟ್ಟು ಹುತಾತ್ಮರಾದ ಕ್ಯಾಪ್ಟನ್ ವಿಕ್ರಂ ಬತ್ರ, ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನೋಜ್ ನಯ್ಯರ್ ಮುಂತಾದ ವೀರರ ಬಲಿದಾನವು ನಮ್ಮ ನಮ್ಮೆಲ್ಲರ ಸ್ಮೃತಿಯಲ್ಲಿ ಅಚ್ಚಳಿಯದೆ ಉಳಿಯಬೇಕು. ದೇಶದ ಹಿತ ಕಾಯುವುದಕ್ಕೆ, ಸುಸ್ಥಿರ ಸಮಾಜದ ರಚನೆಗೆ ನಾವೆಲ್ಲಾ ಪಣತೊಡಬೇಕೆಂದರು. ಶಾಲಾ ಎನ್ ಸಿ ಸಿ ಕೆಡೆಟ್ ಸರಾ ಸಾದಿಕ್ ಕಾರ್ಗಿಲ್ ವಿಜಯೋತ್ಸವದ ಮಹತ್ವ ಹಾಗೂ ಹೋರಾಟ ಮತ್ತು ದೇಶಭಕ್ತಿಯ ಬಗ್ಗೆ ಬೆಳಕು ಚೆಲ್ಲಿದರು.
ಕು. ಅಭಿಜ್ಞಾ ನಿರ್ದೇಶಸಿದ ಕಿರು ನಾಟಕವನ್ನು ಎನ್‌ಸಿಸಿ ವಿದ್ಯಾರ್ಥಿಗಳು ಅಭಿನಯಿಸಿ ತೋರಿಸಿದರು. ವಿದ್ಯಾರ್ಥಿಗಳು ಸಮೂಹ ದೇಶಭಕ್ತಿ ಗೀತೆಯನ್ನು ಹಾಡಿದರು. ಎನ್ ಸಿ ಸಿ ಕೆಡೆಟ್ ಝಾರಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.






