ಸಾಂಸ್ಕೃತಿಕ

ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ನಟಿ ರುಕ್ಕಿಣಿ ವಸಂತ್  ಪೋಟೋ ವೈರಲ್ ಪ್ರಕರಣ: ಎಫ್‌ಐಆ‌ರ್ ದಾಖಲು

Views: 33

ಕನ್ನಡ ಕರಾವಳಿ ಸುದ್ದಿ : ಕಾಂತಾರ ನಟಿ ರುಕ್ಕಿಣಿ ವಸಂತ್‌ ಅವರು ಸಿನಿಮಾ ಒಂದರ ಚಿತ್ರೀಕರಣಕ್ಕೆ ಬಿಕಿನಿ ಧರಿಸಿದ್ದಾರೆ ಎನ್ನಲಾದ ಫೇಕ್ ವಿಡಿಯೋ ವೈರಲ್ ಮಾಡಿದವರ ವಿರುದ್ಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರುಕ್ಕಿಣಿ ವಸಂತ್ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರಿನಲ್ಲಿ ಎಐ ತಂತ್ರಜ್ಞಾನ ಬಳಸಿ ನನ್ನ ಫೋಟೋವನ್ನು ಬಿಕಿನಿ ರೀತಿ ಸೃಷ್ಟಿ ಮಾಡಿದ್ದಾರೆ. ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಬೇರೆಯೊಬ್ಬರ ದೇಹಕ್ಕೆ ನನ್ನ ಮುಖವನ್ನು ಬಳಸಿದ್ದಾರೆ. ಈ ರೀತಿ ನಕಲಿ ವಿಡಿಯೋ ಮತ್ತು ಪೊಟೊವನ್ನು ಸೃಷ್ಟಿ ಮಾಡಿದ್ದಾರೆ. ನನ್ನ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದರು.

29 ಸೋಶಿಯಲ್ ಮೀಡಿಯಾ ಅಕೌಂಟ್ ವಿರುದ್ಧ ದೂರು ನೀಡಿದ್ದು, 9 ಇನ್ಸಾಗ್ರಾಂ ಅಕೌಂಟ್, 14 ಎಕ್ಸ್ ಖಾತೆ, 6 ಫೇಸ್ ಬುಕ್ ಅಕೌಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿತ್ತು. ಇದೀಗ ಐಟಿ ಕಾಯ್ದೆ ಹಾಗೂ ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆ‌ರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

Back to top button
error: Content is protected !!