ಸಾಂಸ್ಕೃತಿಕ

ಸ್ನೇಹ ಪ್ರೀತಿಗೆ ತಿರುಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಮಜಾ ಭಾರತ’ ‘ಗಿಚ್ಚಿ ಗಿಲಿಗಿಲಿ’ ಜೋಡಿ ಶಿವು-ಮಾನಸಾ

Views: 54

ಕನ್ನಡ ಕರಾವಳಿ ಸುದ್ದಿ: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಾದ ‘ಮಜಾ ಭಾರತ’  ಮತ್ತು ‘ಗಿಚ್ಚಿ ಗಿಲಿಗಿಲಿ’ ಮೂಲಕ ಮನೆಮಾತಾಗಿರುವ ನಟಿ ಮಾನಸಾ ಗುರುಸ್ವಾಮಿ ಹಾಗೂ ಶಿವಕುಮಾರ್ (ಶಿವು) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಪೂರ್ವ ಕಾರ್ಯಕ್ರಮಗಳಾದ ಮೆಹಂದಿ, ಹಳದಿ ಶಾಸ್ತ್ರ ಹಾಗೂ ಬಳೆ ಶಾಸ್ತ್ರಗಳು ನೆರವೇರಿದ್ದು, ಈ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಇದೀಗ ಮದುವೆಯ ವಿಡಿಯೋಗಳು ವೈರಲ್‌ ಆಗಿವೆ. ಜೋಡಿಗೆ ಫ್ಯಾನ್ಸ್‌ ವಿಶ್‌ ಮಾಡುತ್ತಿದ್ದಾರೆ. ಶಿವು ಮತ್ತು ಮಾನಸಾ ಕಿರುತೆರೆಯಿಂದಲೇ ಪರಿಚಿತರು. ‘ಮಜಾ ಭಾರತ’ ಕಾಲದಿಂದಲೂ ಜೊತೆಯಾಗಿ ಹಲವು ಕಾಮಿಡಿ ಸ್ಕಿಟ್‌ಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದ ಈ ಜೋಡಿ, ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಶಿವು ಮತ್ತು ಮಾನಸಾ ಜೋಡಿ ʻಗಿಚ್ಚಿ ಗಿಲಿಗಿಲಿʼ ಕಾರ್ಯಕ್ರಮದ ಸಮಯದಲ್ಲಿಯೇ ಪರಸ್ಪರ ಪರಿಚಯವಾಗಿ, ಆ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಮನೆಯವರ ಒಪ್ಪಿಗೆಯ ಮೇರೆಗೆ ಈಗ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ಮದುವೆಗೆ ಮುಂಚಿತವಾಗಿ ನಡೆದ ಶಾಸ್ತ್ರಗಳಲ್ಲಿ ಈ ಜೋಡಿ ಪರಸ್ಪರ ಕೈಗಳಿಗೆ ಮೆಹಂದಿ ಹಚ್ಚಿಕೊಂಡು ಸಂಭ್ರಮಿಸಿರುವ ಫೋಟೋಗಳು ವೈರಲ್‌ ಆಗಿತ್ತು.

ಶಿವು – ಮಾನಸಾ ಅದ್ದೂರಿ ಮೆಹಂದಿ ಶಾಸ್ತ್ರದಲ್ಲಿ ಸುಷ್ಮಿತಾ ಜಗ್ಗಪ್ಪ, ನಿರೂಪಕ ನಿರಂಜನ್‌ ದೇಶಪಾಂಡೆ ಪತ್ನಿ ಯಶಸ್ವಿನಿ ಸೇರಿದಂತೆ ಹಲವು ಕಿರುತೆರೆ ತಾರೆಯರು ಭಾಗಿಯಾಗಿದ್ದರು. ಈ ಹಿಂದೆ ಇದೇ ಶೋನಲ್ಲಿ ಕಾಣಿಸಿಕೊಂಡಿದ್ದ ಸುಷ್ಮಿತಾ ಮತ್ತು ಜಗಪ್ಪ ಅವರು ಹೀಗೆ ಪ್ರೀತಿಸಿ ಮದುವೆ ಆಗಿದ್ದರು.

Related Articles

Back to top button
error: Content is protected !!