ಯುವಜನ

ಪೋಕ್ಸೋ ಪ್ರಕರಣದ ಆರೋಪಿ ಜೈಲಿನಿಂದಲೇ ಅಪ್ರಾಪ್ತೆಗೆ  ವಿಡಿಯೋ ಕಾಲ್ ಮಾಡಿ ಬೆದರಿಕೆ 

Views: 59

ಕನ್ನಡ ಕರಾವಳಿ ಸುದ್ದಿ: ಜೈಲಿನಲ್ಲಿದರೂ ಪಾಗಲ್ ಪ್ರೇಮಿಯೊಬ್ಬ ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿ ಅಪ್ರಾಪ್ತೆಗೆ ಮಾನಸಿಕ ಹಿಂಸೆ ನೀಡುತ್ತಿರುವ ಆರೋಪ ಕೇಳಿಬಂದಿದೆ.

ಅಪ್ರಾಪ್ತೆಯ ಕುಟುಂಬಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ರೂ ಕೂಡ ಕ್ಯಾರೆ ಎನ್ನುತ್ತಿಲ್ಲ. ಧಾರವಾಡ ಜೈಲಾಧಿಕಾರಿಗಳು ವಿಷಯ ಗೊತ್ತಿದ್ದರೂ ಕೂಡ ಸುಮ್ಮಿದ್ದಾರಾ ಎಂಬ ಅನುಮಾನ ಉಂಟಾಗಿದೆ. ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಜೈಲಿನಿಂದಲೇ ಸಂತ್ರಸ್ತೆಗೆ ವಿಡಿಯೋ ಕಾಲ್ ಮಾಡಿ, ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ತನ್ನ ಪರವಾಗಿ ನ್ಯಾಯಾಲಯದಲ್ಲಿ ಮಾತನಾಡುವಂತೆ ತಾಕೀತು ಮಾಡಿದ್ದಾನೆ.

ವಿಡಿಯೋ ಕಾಲ್ ಮಾಡಿದಾಗ ರಿಸೀವ್ ಮಾಡದೇ ಇದ್ದುದಕ್ಕೆ ಜೀವ ಬೆದರಿಕೆ ಹಾಕಿದ್ದಾನೆ. ಜೊತೆಗೆ ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದರ ನಡುವೆ ವಿಡಿಯೋ ಕಾಲ್ ಮಾಡಿ ಬೆದರಿಕೆ ಹಾಕುತ್ತಿರುವ ವಿಷಯ ಗೊತ್ತಿದ್ದರೂ ಕೂಡ ಧಾರವಾಡ ಜೈಲಾಧಿಕಾರಿಗಳು ಸುಮ್ಮನೆ ಇದ್ದಾರಾ ಎಂಬ ಅನುಮಾನ ಮೂಡಿಬಂದಿದೆ.

Related Articles

Back to top button
error: Content is protected !!