ಸಾಂಸ್ಕೃತಿಕ

ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿ‌ ಮಹಾತ್ಮೆ ಸಿನಿಮಾದ ಮುಹೂರ್ತ

Views: 45

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿನ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿ‌ ಮಹಾತ್ಮೆ ಸಿನಿಮಾದ ಮುಹೂರ್ತ ನೆರವೇರಿದೆ.‌

ಈ ಸಂದರ್ಭದಲ್ಲಿ ದೇವಿ ಮಹಾತ್ಮೆ ಚಿತ್ರದ‌ ನಿರ್ಮಾಪಕ ಗಾಂಧಿರಾಜನ್, ಅನುವಂಶಿಕ ಧರ್ಮದರ್ಶಿಗಳಾದ ಶ್ರೀಯುತ ಸಚ್ಚಿದಾನಂದ ಚಾತ್ರ, ನಿರ್ದೇಶಕ‌ ನಾಗರಾಜ್ ಸೋಮಯಾಜಿ, ಚಿತ್ರದ ‌ಛಾಯಾಗ್ರಾಹಕರಾದ ಎಸ್ ಕೆ ರಾವ್ ಭಾಗಿಯಾಗಿದ್ದರು.

ನಾಗರಾಜ ಸೋಮಯಾಜಿ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ‌ ಹಾಗೂ ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಚಿತ್ರಕ್ಕೆ ಎಸ್.‌ಕೆ ರಾವ್ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ದೇವಿ ಮಹಾತ್ಮೆ ಸಿನಿಮಾ ಶೂಟಿಂಗ್ ಶುರುವಾಗಿದೆ. ಕುಂದಾಪುರದ ಸುತ್ತಮುತ್ತ ಚಿತ್ರೀಕರಣ ಮಾಡಲಾಗುತ್ತಿದ್ದು, ಅತಿ ಹೆಚ್ಚು ತಾರಾಬಳಗ ಚಿತ್ರದಲ್ಲಿ ಕೆಲಸ‌ ಮಾಡಲಿದೆ.

ಇದರಲ್ಲಿ ಹಾಸ್ಯ ಇದೆ. ಥ್ರಿಲ್ಲರ್ ಇದೆ. ಇನ್ನುಳಿದಂತೆ ಡೈರೆಕ್ಟರ್ ನಾಗರಾಜ ಸೋಮಯಾಜಿ ಈ ಹಿಂದಿನ ತಮ್ಮ ಮರ್ಯಾದೆ ಪ್ರಶ್ನೆ ಚಿತ್ರದಲ್ಲಿ ಒಳ್ಳೆ ಕಥೆಯನ್ನೆ ಹೇಳಿದ್ದರು. ಹಾಗೇನೆ ಈ ಚಿತ್ರದಲ್ಲಿ ಕಾಮಿಡಿ ಥ್ರಿಲ್ಲರ್ ಕಂಟೆಂಟ್ ಹೇಗೆ ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Related Articles

Back to top button
error: Content is protected !!