ಕರಾವಳಿ
ತೆಂಗಿನಕಾಯಿ ತೆಗೆಯಲು ಮರ ಎರಿದ ವ್ಯಕ್ತಿ ಮರದಲ್ಲೇ ಹೃದಯಾಘಾತದಿಂದ ಸಾವು
Views: 106
ಕನ್ನಡ ಕರಾವಳಿ ಸುದ್ದಿ: ತೆಂಗಿನಕಾಯಿ ತೆಗೆಯಲು ಮರ ಎರಿದ ವ್ಯಕ್ತಿ ಮರದಲ್ಲೇ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ಕಟೀಲು ಜಲಕದ ಕಟ್ಟೆ ಜಯರಾಮ ಶೆಟ್ಟಿ (75)
ಸುರತ್ಕಲ್ ಮುಕ್ಕದಲ್ಲಿ ವಾಸವಾಗಿರುವ ಜಯರಾಮ ಶೆಟ್ಟಿಯವರು ಕಟೀಲು ಸಮೀದ ಜಲಕದ ಕಟ್ಟೆ ಸಮೀಪ ಜಮೀನು ಹೊಂದಿದ್ದಾರೆ. ಬುಧವಾರ ಕಟೀಲು ಅಜಾರು ಜಲಕದಕಟ್ಟೆ ಸಮೀಪದಲ್ಲಿನ ತಮ್ಮ ಜಮೀನಿನಲ್ಲಿರುವ ತೆಂಗಿನಮರಕ್ಕೆ ಯಂತ್ರದ ಸಹಾಯದಿಂದ ಏರಿದ್ದಾರೆ. ಈ ಸಂದರ್ಭ ತೆಂಗಿನ ಮರದಲ್ಲಿ ಹೃದಯಾಘಾತಗೊಂಡಿದ್ದಾರೆ.
ಆದರೆ ಈ ಸಂದರ್ಭ ಯಾರೂ ಇಲ್ಲದ ಕಾರಣ ಗಮನಕ್ಕೆ ಬಂದಿಲ್ಲ, ಸಂಜೆ ಆಸುಪಾಸಿನವರು ತೆಂಗಿನ ಮರದಲ್ಲಿ ವ್ಯಕ್ತಿ ನೇತಾಡುತ್ತಿರುವುದನ್ನು ಗಮನಿಸಿ ಅಗ್ನಿಶಾಮಕದಳ ಮತ್ತು ಬಜಪೆ ಪೊಲೀಸರಿಗೆ ತಿಳಿಸಿದ್ದಾರೆ.
ಅಗ್ನಿಶಾಮಕ ದಳದವರ ಸಹಾಯದಿಂದ ಜಯರಾಮ ಶೆಟ್ಟಿಯವರ ಮೃತದೇಹವನ್ನು ಕೆಳಗಿಳಿಸಲಾಗಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






