ಸಾಂಸ್ಕೃತಿಕ

ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ವರ್ತನೆ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು 

Views: 76

ಕನ್ನಡ ಕರಾವಳಿ ಸುದ್ದಿ: ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧ ಬೆಂಗಳೂರಿನಲ್ಲಿ ಕೇಸ್ ದಾಖಲಾಗಿದೆ. ವಕೀಲ ಹುಸೇನ್ ಓವೈಸಿ ಅನ್ನೋರು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆಯೇ ದೂರು ದಾಖಲಿಸಿದ್ದಾರೆ. ಆರ್ಯನ್ ಖಾನ್ ಜೊತೆ ಪಬ್ನಲ್ಲಿ ಇದ್ದವರನ್ನೂ ವಿಚಾರಣೆ ನಡೆಸುವಂತೆ ವಕೀಲರು ದೂರು ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಅವರಿಗೆ ದೂರು ನೀಡಿದ್ದಾರೆ.

ಏನಿದು ಪ್ರಕರಣ..?

ನವೆಂಬರ್ 28 ರಂದು ಅಶೋಕನಗರದಲ್ಲಿ ಪಬ್ ಓಪನಿಂಗ್ ಆಗಿತ್ತು. ಈ ಪಬ್ಗೆ ನವೆಂಬರ್29 ರಂದು ಆರ್ಯನ್ ಖಾನ್ ಅತಿಥಿಯಾಗಿ ಬಂದಿದ್ದ. ಆರ್ಯನ್ ಖಾನ್ ಜೊತೆ ಪಬ್ಗೆ ಕಾಂಗ್ರೆಸ್ ಯುವ ನಾಯಕ ನಲಪಾಡ್ ಹಾಗೂ ಸಚಿವ ಜಮೀರ್ ಪುತ್ರ ಝೈದ್ ಖಾನ್ ಬಂದಿದ್ದರು. ಈ ವೇಳೆ ಆರ್ಯನ್ ಖಾನ್, ಮಿಡಲ್ ಫಿಂಗರ್ ತೋರಿಸಿ ದುರ್ವತನೆ ತೋರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಪಬ್ನಲ್ಲಿ ಹತ್ತಾರು ಮಂದಿ ಮಹಿಳೆಯರಿದ್ದರು. ಅವರ ಗೌರವಕ್ಕೆ ಆರ್ಯನ್ ಖಾನ್ ದಕ್ಕೆ ತಂದಿದ್ದಾರೆ. ಮಹಿಳೆಯರ ಗೌರವಕ್ಕೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಲಾಗಿದೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಆರ್ಯನ್ ಖಾನ್ ಬೆಂಗಳೂರಿಗೆ ಬಂದಿದ್ದು ಯಾವಾಗ? ಯಾವ ಪಬ್ಗೆ ಹೋಗಿದ್ದ? ಅಲ್ಲಿ ಯಾವೆಲ್ಲ ಸೆಲೆಬ್ರೆಟಿಗಳು, ರಾಜಕಾರಣಿಗಳ ಪುತ್ರರು ಭಾಗಿಯಾಗಿದ್ದರು ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

 

Related Articles

Back to top button