ಸಾಂಸ್ಕೃತಿಕ
ಮ್ಯೂಸಿಕ್ ಕಂಪೋಸರ್ ರವಿ ಬಸ್ರೂರುಗೆ ಟಾಲಿವುಡ್ ನಟ ಉಡುಗೊರೆಯಾಗಿ ನೀಡಿದ ವಾಚ್ ನ ಬೆಲೆ ಎಷ್ಟು ಗೊತ್ತಾ?
Views: 50
ಕನ್ನಡ ಕರಾವಳಿ ಸುದ್ದಿ: ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ಸಂಗೀತ ನಿರ್ದೇಶಕ ರವಿ ಬಸ್ರೂರುಗೆ ಕನ್ನಡದ ಜೊತೆಗೆ ಇತರ ಭಾಷೆಗಳಲ್ಲೂ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಟಾಲಿವುಡ್ ನಟ-ನಿರ್ದೇಶಕ ವಿಶ್ವಕ್ ಸೇನ್ ಅವರು ರವಿ ಬಸೂರಿಗೆ ದುಬಾರಿ ರೊಲೆಕ್ಸ್ ವಾಚ್ ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ. ಈ ವಾಚ್ ಮೌಲ್ಯ ಸುಮಾರು 35 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.
‘#ಕಲ್’ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು. ಚಿತ್ರಕ್ಕೆ ರವಿ ನೀಡಿದ ಹಿನ್ನೆಲೆ ಸಂಗೀತದ ಬಗ್ಗೆ ವಿಶ್ವಕ್ ಸೇನ್ ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂಸಾತ್ಮಕ ಥೀಮ್ ಹೊಂದಿರುವ ಚಿತ್ರದ ವಾತಾವರಣವನ್ನು ಮ್ಯೂಸಿಕ್ ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸಿದೆ ಎಂದು ಅವರು ಹೇಳಿದರು. ಕೃತಜ್ಞತೆ ಸೂಚಕವಾಗಿ ರವಿ ಅವರಿಗೆ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.






