ಜ್ಞಾನದಾ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ

Views: 215
ಕನ್ನಡ ಕರಾವಳಿ ಸುದ್ದಿ: 2025 -26ನೇ ಸಾಲಿನ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಜೂನ್ 30ರಂದು ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಾಗರತ್ನ ಶಾಲಾ ಸಂಸತ್ತು ಮತ್ತು ನೂತನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ, ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ವಿದ್ಯೆಯನ್ನು ಕಲಿಯುವುದರ ಜೊತೆಗೆ ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಸ್ವಚ್ಛತೆಯತ್ತ ಹೆಚ್ಚು ಗಮನವಹಿಸಿ, ಸಂಸ್ಕಾರವಂತರಾಗಿ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಮಂತ್ರಿಮಂಡಲ ಕಾರ್ಯಕಲಾಪದ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ, ಸಂಸ್ಥೆಯ ಕಾರ್ಯದರ್ಶಿ ಧೀರಜ್ ಬಿ ನೂತನವಾಗಿ ಚುನಾಯಿತರಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಶುಭ ಕೋರಿದರು.
ಪ್ರಾಂಶುಪಾಲರಾದ ಡಾI ರವಿದಾಸ್ ಶೆಟ್ಟಿ ಚುನಾಯಿತ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಭೆಯಲ್ಲಿ ವಿವಿಧ ಸಂಘಗಳ ಮಾರ್ಗದರ್ಶಕರು ವಿದ್ಯಾರ್ಥಿಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು ಶಿಕ್ಷಕಿಯರಾದ ಅಕ್ಷತಾ ನಾಯ್ಕ್ ಸ್ವಾಗತಿಸಿದರು. ಸಿಜಿ ವಿ ಪಿ ವಂದಿಸಿದರು.ಆಶಾ ಕಾರ್ಯಕ್ರಮ ನಿರ್ವಹಿಸಿದರು.