ಸಾಂಸ್ಕೃತಿಕ

ಲಾರಿ ಮತ್ತು ಬೈಕ್ ಅಪಘಾತ: ಇಬ್ಬರು ಡ್ಯಾನ್ಸರ್ ಮೃತ್ಯು

Views: 130

ಕನ್ನಡ ಕರಾವಳಿ ಸುದ್ದಿ : ಲಾರಿ ಮತ್ತು ಬೈಕ್ ಅಪಘಾತಕ್ಕೆ ಇಬ್ಬರು ಡ್ಯಾನ್ಸರ್ ಪ್ರಾಣ ಕಳೆದುಕೊಂಡ ಘಟನೆ ಕುಣಿಗಲ್ ಬೈಪಾಸ್ನಲ್ಲಿ ನಡೆದಿದೆ. ಪ್ರಜ್ವಲ್ 22, ಸಹನ 21 ಮೃತ ದುರ್ದೈವಿಗಳು.

ವೇಗವಾಗಿ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಬೈಕ್ ಸವಾರರು ಕುಣಿಗಲ್ನಿಂದ ಬೆಂಗಳೂರಿಗೆ ಬರುತ್ತಿದ್ದರು. ಅಪಘಾತ ಬೆನ್ನಲ್ಲೇ ಲಾರಿ ಸಮೇತ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜ್ವಲ್ ಶ್ರೀರಾಂಪುರದ ನಿವಾಸಿಯಾಗಿದ್ದರೆ, ಸಹನಾ ಕುರುಬರಹಳ್ಳಿ ನಿವಾಸಿ. ಇಬ್ಬರೂ ಡ್ಯಾನ್ಸರ್ಸ್ ಗಳಾಗಿದ್ದರಿಂದ ಕೆಲ ವರ್ಷಗಳ ಹಿಂದೆ ಪರಿಚಯವಾಗಿತ್ತು. ಇವೆಂಟ್ ಒಂದರಲ್ಲಿ ಇಬ್ಬರು ಪರಿಚಯವಾಗಿದ್ದರು. ಇಂದು ಇವೆಂಟ್ ಅಮೌಂಟ್ ತೆಗೆದುಕೊಂಡು ಬರಲು ಕುಣಿಗಲ್ಗೆ ಬಂದಿದ್ದರು. ಹಣ ಪಡೆದು ವಾಪಸ್ ಹೋಗ್ತಿದ್ದಾಗ ದುರ್ಘಟನೆ ನಡೆದಿದೆ.

Related Articles

Back to top button