ಇತರೆ

ಶಿಫ್ಟ್ ಆಧಾರಿತ ಜೀವನಕ್ಕೆ ಪೊಲೀಸರ ಅನುಮತಿ ಕೇಳಿದ ಮಹಿಳೆ.. ಹಗಲಿನಲ್ಲಿ ಪ್ರೇಮಿ..ರಾತ್ರಿ ಗಂಡ ಇರಬೇಕು!

Views: 0

ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಹಮೂದಾಬಾದ್‌ನಲ್ಲಿ ನಡೆದಿರುವ ವಿಚಿತ್ರ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಹಮೂದಾಬಾದ್ ಕೊತ್ವಾಲಿ ಪೊಲೀಸ್ ಠಾಣೆಗೆ ಪತಿ, ಪತ್ನಿ ಹಾಗೂ ಆಕೆಯ ಪ್ರೇಮಿ ಮೂವರೂ ಒಟ್ಟಿಗೆ ಬಂದು ಪೊಲೀಸರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಮೂವರೂ ಒಪ್ಪಿಗೆಯ ಮೇರೆಗೆ ಒಂದೇ ಮನೆಯಲ್ಲಿ ವಾಸಿಸಲು ಬಯಸಿದ್ದು, ಇದಕ್ಕೆ ಪತಿಯ ತಂದೆ ಹಾಗೂ ಇಬ್ಬರು ಸಹೋದರಿಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ತಮಗೆ ಒಟ್ಟಿಗೆ ಇರಲು ಅವಕಾಶ ಕಲ್ಪಿಸಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಇನ್ನೂ ವಿಚಿತ್ರವೆಂದರೆ, ಮಹಿಳೆ ತಮ್ಮ ‘ಶಿಫ್ಟ್ ಆಧಾರಿತ ಸಂಸಾರ’ದ ಯೋಜನೆಯನ್ನೂ ಪೊಲೀಸರಿಗೆ ವಿವರಿಸಿದ್ದಾಳೆ ಎನ್ನಲಾಗಿದೆ.

ಗಂಡ ಹಗಲಿನಲ್ಲಿ ಕೆಲಸಕ್ಕೆ ತೆರಳಿದಾಗ ಪ್ರೇಮಿ ತನ್ನೊಂದಿಗೆ ಇರಬೇಕು. ರಾತ್ರಿ ಪ್ರೇಮಿ ನೈಟ್ ಶಿಫ್ಟ್‌ಗೆ ಕೆಲಸಕ್ಕೆ ಹೋದಾಗ ಪತಿ ಮನೆಗೆ ಬಂದು ತನ್ನೊಂದಿಗೆ ಇರಬೇಕು ಎಂಬುದು ಆಕೆಯ ಯೋಜನೆ ಎನ್ನಲಾಗಿದೆ.

ಮೂವರ ಈ ವಿಚಿತ್ರ ಮನವಿಯನ್ನು ಕೇಳಿ ಪೊಲೀಸರು ಕೂಡ ಅಚ್ಚರಿಗೊಂಡಿದ್ದಾರೆ. ಇಂತಹ ಪ್ರಕರಣ ತಮ್ಮ ಪೊಲೀಸ್ ಸೇವೆಯಲ್ಲಿ ಅಪರೂಪ ಎಂದು ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.

ಸದ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ‘ಸಂಸಾರಕ್ಕೂ ಶಿಫ್ಟ್ ವ್ಯವಸ್ಥೆನಾ..?’ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Related Articles

Back to top button
error: Content is protected !!