3ನೇ ಮದುವೆಗೆ ತಯಾರಿಯಲ್ಲಿದ್ದಾಗ ಇಬ್ಬರು ಮಾಜಿ ಪತ್ನಿಯರು ಎಂಟ್ರಿ ಕೊಟ್ಟು ಗಲಾಟೆ

Views: 148
ಕನ್ನಡ ಕರಾವಳಿ ಸುದ್ದಿ: 3ನೇ ಮದುವೆಗೆ ತಯಾರಿ ನಡೆಯುತ್ತಿದ್ದಾಗ ಕಲ್ಯಾಣ ಮಂಟಪಕ್ಕೆ ಇಬ್ಬರು ಮಾಜಿ ಪತ್ನಿಯರು ಎಂಟ್ರಿ ಕೊಟ್ಟು ಗಲಾಟೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಬಿಕ್ಕಿಮಟ್ಟಿ ತಾಂಡದಲ್ಲಿ ನಡೆದಿದೆ.
ಇಬ್ಬರು ಮಹಿಳೆಯರ ಗಲಾಟೆಗೆ ಮದುವೆ ಮನೆಯಲ್ಲಿ ಸಂಬಂಧಿಕರು ಸುಸ್ತಾಗಿದ್ದು, ಕೊನೆಗೆ ಕುಮಾರ್ ನಾಯ್ಕ್ ಅವರ 3ನೇ ಮದುವೆ ನಿಂತೇ ಹೋಗಿದೆ.
ಮೊದಲನೆಯ ಹೆಂಡತಿ ಆರೋಪವೇನು?
18 ವರ್ಷದ ಹಿಂದೆ ಕುಮಾರ್ ನಾಯ್ಕ್ ಅವರಿಗೆ ಮೊದಲ ಮದುವೆ ಆಗಿದೆ. 2ನೇ ಮದುವೆ ಆಗುತ್ತಿದ್ದ ಸುದ್ದಿ ಕೇಳಿ ಮೊದಲ ಪತ್ನಿ ಮದುವೆ ನಿಲ್ಲಿಸಲು ಬಂದಿದ್ದಾರೆ.
ಮದುವೆ ಮನೆಗೆ ಬಂದ ಮೊದಲ ಪತ್ನಿ, ನನ್ನ ಗಂಡ ತುಂಬಾ ಜನರಿಗೆ ಮೋಸ ಮಾಡಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
2ನೇ ಹೆಂಡತಿಯ ಆರೋಪವೇನು?
ಮೊದಲ ಪತ್ನಿ ಗಲಾಟೆ ಮಾಡುತ್ತಿರುವಾಗಲೇ ಎರಡನೇ ಮಹಿಳೆ ಕೂಡ ಎಂಟ್ರಿ ಕೊಟ್ಟಿದ್ದಾರೆ. ಕುಮಾರ್ ನಾಯ್ಕ್ ನನ್ನ ಜೊತೆಗಿರುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾನೆ. ನನಗೆ ಎರಡು ಮಕ್ಕಳು ಕೊಟ್ಟು ಇದೀಗ ನನ್ನ ಮಕ್ಕಳೇ ಅಲ್ಲ ಎನ್ನುತ್ತಾರೆ. ಕೋರ್ಟ್ನಲ್ಲಿ ಡಿಎನ್ಎ ಪರೀಕ್ಷೆಗೆ ಮನವಿ ಮಾಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಇಬ್ಬರು ಮಹಿಳೆಯರ ಗಲಾಟೆಗೆ ಮದುವೆಗೆ ಬಂದ ಜನ, ಸಂಬಂಧಿಕರು ಫುಲ್ ಸುಸ್ತಾಗಿದ್ದಾರೆ.