ಇತರೆ

ಕೊಲ್ಲೂರು: ಗೂಡ್ಸ್ ವಾಹನ ಕಾರಿಗೆ ಢಿಕ್ಕಿ, ಓರ್ವ ಸಾವು,ಇಬ್ಬರಿಗೆ ಗಾಯ

Views: 147

ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಸಮೀಪ ಇಡೂರು ಕುಂಜಾಡಿ ಗ್ರಾಮದ ಜನ್ನಲ್ ಎಂಬಲ್ಲಿ  ಮಿನಿ ಗೂಡ್ಸ್ ವಾಹನ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ಮೃತರನ್ನು ಕಾರು ಚಾಲಕ ಜೋಸ್ ಪಿಟಿ ರಿನ್ಸೋ ಎಂದು ತಿಳಿದು ಬಂದಿದೆ.

ಕಾರಿನಲ್ಲಿದ್ದ ತ್ರೇಸಿಯಮ್ಮ ಶಾಂತಿ ಎಂಬವರು ಮಣಿಪಾಲ ಆಸ್ಪತ್ರೆ ಹಾಗೂ ಶಬರೀಶ ಎಂಬವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Related Articles

Back to top button
error: Content is protected !!