ಧಾರ್ಮಿಕ

ದೇವಾಲಯದೊಳಗೆ ಅರ್ಚಕ ನೇಣಿಗೆ ಶರಣು

Views: 133

ಕನ್ನಡ ಕರಾವಳಿ ಸುದ್ದಿ: ಹಳೇಬೀಡು ಹೋಬಳಿ ಗಂಗೂರು ಗ್ರಾಮದ ಅರ್ಚಕ ರಂಗಸ್ವಾಮಿ (65) ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದಲ್ಲೇ ನೇಣಿಗೆ ಶರಣಾಗಿದ್ದಾರೆ.

ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದಲ್ಲಿ ರಂಗಸ್ವಾಮಿ ದೀರ್ಘ ಕಾಲದಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಅವರು ಸರಿಯಾಗಿ ಪೂಜೆ ನಡೆಸುತ್ತಿಲ್ಲ ಎಂದು ಆರೋಪಿಸಿ ಕೆಲವರು ತಹಸೀಲ್ದಾರ್‌ಗೆ ದೂರು ನೀಡಿ ಬೇರೆ ಅರ್ಚಕರನ್ನು ನೇಮಿಸುವಂತೆ ಒತ್ತಾಯಿಸಿದ್ದರು. ಈ ವಿಚಾರದಲ್ಲಿ ರಂಗಸ್ವಾಮಿ ಮತ್ತು ಗ್ರಾಮಸ್ಥರ ನಡುವೆ ತಿಕ್ಕಾಟ ನಡೆದಿತ್ತು. ಇದರಿಂದ ನೊಂದ ಅವರು ಬುಧವಾರ ದೇವಾಲಯದೊಳಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ

ದೇವಾಲಯದಲ್ಲಿ ಸಾವಿನ ಘಟನೆ ನಡೆಯಬಾರದಾಗಿತ್ತು. ದೇವಾಲಯ ಮುಜಾರಾಯಿ ಇಲಾಖೆಗೆ ಸೇರಿದೆ. ಹೆಚ್ಚು ಸಮಯ ದೇವಾಲಯದಲ್ಲಿ ಮೃತದೇಹ ಬಿಡುವಂತಿಲ್ಲ. ದೇವಾಲಯ ಬಾಗಿಲು ತೆಗೆಯಲು ಅವಕಾಶ ಕೊಡಿ’ ಎಂದು ತಹಶೀಲ್ದಾರ್ ತಿಳಿಸಿದರು.

‘ನಮಗೆ ನ್ಯಾಯಬೇಕು. ಕಿರುಕುಳ ನೀಡಿದವರಿಗೆ ಶಿಕ್ಷೆ ಆಗಬೇಕು’ ಎಂದು ಮೃತರ ಕುಟುಂಬದವರು ಪಟ್ಟು ಹಿಡಿದರು. ‘ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಹಳೇಬೀಡು ಪೊಲೀಸರಿಂದ ಕುಟುಂಬಕ್ಕೆ ಭದ್ರತೆ ನೀಡುತ್ತೇವೆ’ ಎಂದು ಮಮತಾ ತಿಳಿಸಿದರು.

ಆದರೂ ದುಃಖದಲ್ಲಿದ್ದ ಕುಟುಂಬದವರು ದೇವಾಲಯದ ಬಾಗಿಲು ತೆಗೆಯಲು ಬಿಡುವುದಿಲ್ಲ ಎಂದು ಹಠ ಹಿಡಿದರು. ಸುದೀರ್ಘ ಮಾತುಕತೆ ನಡೆಸಿದ ನಂತರ ಬಾಗಿಲು ತೆಗೆಯಲು ಕುಟುಂಬದವರು ಅವಕಾಶ ನೀಡಿದರು. ಬಾಗಿಲಿಗೆ ಒಳಗಿನಿಂದ ಬೋಲ್ಟ್ ಹಾಕಿದ್ದರಿಂದ ಬಾಗಿಲು ತೆಗೆಯಲು ಪೊಲೀಸರು ಹರಸಾಹಸ ಪಟ್ಟರು.

 

 

Related Articles

Back to top button
error: Content is protected !!