ಇತರೆ

ಅಮೆರಿಕದಲ್ಲಿ ಪತ್ನಿ ಪುತ್ರನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮೈಸೂರು ಉದ್ಯಮಿ

Views: 167

ಕನ್ನಡ ಕರಾವಳಿ ಸುದ್ದಿ: ಮೈಸೂರು ಮೂಲದ ಉದ್ಯಮಿಯೊಬ್ಬರು ಪತ್ನಿ, ಪುತ್ರನಿಗೆ ಗುಂಡಿಕ್ಕಿ ಹತ್ಯೆ ಮಾಡಿ ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ  ಅಮೇರಿಕಾದಲ್ಲಿ ನಡೆದಿದೆ.

ಪತ್ನಿ ಶ್ವೇತಾ, ಹಾಗೂ ಪುತ್ರನನ್ನು ಕೊಲೆ ಮಾಡಿದ ಬಳಿಕ ಹರ್ಷ ಕಿಕ್ಕೇರಿ ಅಲಿಯಾಸ್ ಹರ್ಷವರ್ಧನ್ (57) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗುರುವಾರ ರಾತ್ರಿ ಅನಾಹುತ ಸಂಭವಿಸಿದ್ದು, ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹರ್ಷ ತಮ್ಮ ಪತ್ನಿ ಶ್ವೇತಾ, ಇಬ್ಬರು ಪುತ್ರರೊಂದಿಗೆ ಅಮೆರಿಕದ ನ್ಯೂ ಕ್ಯಾಸಲ್‌ನಲ್ಲಿ ವಾಸವಿದ್ದರು.ಆ ವೇಳೆ ಏಳು ವರ್ಷದ ಕಿರಿಯ ಪುತ್ರ ಮನೆಯಿಂದ ಹೊರಹೋಗಿದ್ದರಿಂದ ಬದುಕುಳಿದಿದ್ದಾನೆ. ದಂಪತಿಗಳು ವಾಷಿಂಗ್ಟನ್‌ನ ನ್ಯೂಕ್ಯಾಸಲ್‌ನಲ್ಲಿರುವ ಟೌನ್‌ಹೋಮ್‌ನಲ್ಲಿ ವಾಸವಿದ್ದರು. ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮದವರಾದ ಹರ್ಷ, ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಿಂದ (ಎಸ್‌ಜೆಸಿಇ) ಎಂಜಿನಿಯರಿಂಗ್ ಪದವಿ ಪಡೆದರು. ನಂತರ ಅವರು ಯುನೈಟೆಡ್ ಸ್ಟೇಟ್ಸ್ (ಯುಎಸ್) ನ ಮೈಕ್ರೋಸಾಫ್ಟ್‌ನಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದರು, ಅಲ್ಲಿ ಅವರು ರೋಬೋಟ್‌ಗಳನ್ನು ನಿರ್ಮಿಸುವಲ್ಲಿ ತೊಡಗಿಸಿಕೊಂಡಿದ್ದರು.

Related Articles

Back to top button
error: Content is protected !!