ಇನ್ಮುಂದೆ ಆಧಾರ್ ಕಾರ್ಡ್‌ನ ಮೂಲ ಪ್ರತಿಯನ್ನು ಕೊಂಡೊಯ್ಯುವ ಅಗತ್ಯವಿಲ್ಲ, ನಿಮ್ಮ ಮುಖವೇ ಆಧಾರ್!

Views: 142
ಕನ್ನಡ ಕರಾವಳಿ ಸುದ್ದಿ: ಇನ್ಮುಂದೆ ನೀವು ನಿಮ್ಮ ಆಧಾರ್ ಕಾರ್ಡ್‌ನ ಮೂಲ ಪ್ರತಿಯನ್ನು ಎಲ್ಲಿಗೂ ಕೊಂಡೊಯ್ಯುವ ಅಗತ್ಯವಿಲ್ಲ. ಹೌದು! ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೊಸ ಅಪ್ಲೇಟ್ ಒಂದನ್ನು ನೀಡಿದ್ದಾರೆ.
ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತು ಮುಖ ದೃಢೀಕರಣವನ್ನು ಬಳಸಲಾಗುತ್ತದೆ. ಪ್ರಸ್ತುತ ಈ ಅಪ್ಲಿಕೇಶನ್ ಬೀಟಾ ಆವೃತ್ತಿಯಲ್ಲಿದ್ದು, ಯುಐಡಿಎಐ ಇದನ್ನು ಪರೀಕ್ಷಿಸುತ್ತಿದೆ. ಎಲ್ಲಾ ಪರೀಕ್ಷೆಗಳು ಪೂರ್ಣಗೊಂಡ ನಂತರವೇ ಅದನ್ನು ಪ್ಲೇ ಸ್ಟೋರ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
UPI ರೀತಿ ಆಧಾರ್ ಆಪ್ ಕಾರ್ಯ ನಿರ್ವಹಣೆ
ಒಂದೇ ಒಂದು ಟ್ಯಾಪ್ ಮೂಲಕ ಬಳಕೆದಾರರು ಅಗತ್ಯ ಡೇಟಾ ಮಾತ್ರ ಶೇರ್ ಮಾಡಿಕೊಳ್ಳಬಹುದು. ಜೊತೆಗೆ ನಿಮ್ಮ ವೈಯಕ್ತಿಕ ಸುರಕ್ಷಿತವಾಗಿರುವ ಜೊತೆಗೆ ಅದರ ಮೇಲೆ ಪೂರ್ತಿ ನಿಯಂತ್ರಣ ಇರುತ್ತದೆ. ಬಳಕೆದಾರರ ಫೇಸ್ ಐಡಿ ದೃಢೀಕರಣ ಮಾಡುವುದು ಈ ಆಪ್‌ನ ಪ್ರಮುಖ ವೈಶಿಷ್ಟ್ಯವಾಗಿದೆ. ಗುರುತಿನ ಚೀಟಿ, ಮಾಹಿತಿ ಪರಿಶೀಲನೆ ಹೆಚ್ಚು ಸರಳವಾಗಿರುತ್ತದೆ. ಇದರೊಂದಿಗೆ ಯುಪಿಐ ರೀತಿ ಆಪ್ QR ಕೋಡ್ ಅನ್ನು ಸ್ಕ್ಯಾನ್ ಮಾಡಿಯೂ ಪರಿಶೀಲಿಸಬಹುದು.
ಆಧಾರ್ ಅಪ್ಲಿಕೇಶನ್ ನಿಂದ ಪ್ರಯೋಜನ ಏನು?
ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ, ನಿಮ್ಮ ಪರಿಶೀಲನೆಯನ್ನು QR ಸ್ಕ್ಯಾನಿಂಗ್ ಮತ್ತು ಮುಖ ದೃಢೀಕರಣದ ಮೂಲಕ ಮಾತ್ರ
ನಿಮ್ಮ ಅನುಮತಿಯಿಲ್ಲದೆ ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗುವುದಿಲ್ಲ.
ಪರಿಶೀಲನೆಗಾಗಿ ಎಲ್ಲಿಯೂ ಮೂಲ ದಾಖಲೆಗಳು ಅಥವಾ ನಕಲು ಪ್ರತಿಗಳನ್ನು ತೋರಿಸುವ ಅಗತ್ಯವಿಲ್ಲ.
ಹೊಸ ಆಧಾರ್ ಅಪ್ಲಿಕೇಶನ್ ಮೂಲಕ ಜನರು ಎಲ್ಲಾ ರೀತಿಯ ವಂಚನೆಗಳಿಂದ ರಕ್ಷಿಸಲ್ಪಡುತ್ತಾರೆ.