ಸಾಮಾಜಿಕ

ಅತ್ತೆಯಿಂದಲೇ ಅಳಿಯನ ಹತ್ಯೆ: ಅಮ್ಮ-ಮಗಳು ಪೊಲೀಸರ ವಶಕ್ಕೆ

Views: 142

ಕನ್ನಡ ಕರಾವಳಿ ಸುದ್ದಿ: ಹೆಸರಘಟ್ಟ ಬಳಿ ಬಿಜಿಎಸ್ ಲೇಔಟ್ ಬಳಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ ಪ್ರಕರಣದ ಸಂಬಂಧ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಹೆಣ್ಣು ಕೊಟ್ಟ ಅತ್ತೆಯೇ ತನ್ನ ಅಳಿಯನನ್ನು ಕೊಲೆಗೈದ ಸಂಗತಿ ಬಯಲಾಗಿದೆ.

ಶಾಸಕರೊಬ್ಬರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಲೋಕನಾಥ್ ಸಿಂಗ್ ಮಾ.22ರಂದು ಕೊಲೆಯಾಗಿದ್ದರು. ಮೇಲ್ನೋಟಕ್ಕೆ ಹಳೇ ವೈರಿಗಳು ಅಥವಾ ರೌಡಿಶೀಟರ್‌ಗಳು ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಸ್ವಂತ ಅತ್ತೆಯೇ ಅಳಿಯನನ್ನು ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.

ಉದ್ಯಮಿ ಮಗಳಿಗೆ ಬೆದರಿಸಿ ಮದುವೆ: ಕಳೆದ ಡಿಸೆಂಬರ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮಗಳಿಗೆ ಬ್ಲ್ಯಾಕ್ ಮೇಲ್ ಮಾಡಿ ಲೋಕನಾಥ್ ಮದುವೆ ಮಾಡಿಕೊಂಡಿದ್ದರು. ಮಗಳ ಭವಿಷ್ಯ ಹಾಗೂ ಕುಟುಂಬದ ಮರ್ಯಾದೆಗೆ ಅಂಜಿ ಯುವತಿಯ ತಂದೆ-ತಾಯಿ ಮಗಳನ್ನು ಮದುವೆ ಮಾಡಿಕೊಟ್ಟಿ ದ್ದರು. ಇದರಿಂದ ನೊಂದ ತಂದೆ, ತಾಯಿ ಲೋಕನಾಥ್‌ಗೆ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದ್ದರು. ಅಳಿಯ, ಮಗಳ ಜತೆ ಬಿಜಿಎಸ್ ಲೇಔಟ್‌ಗೆ ಮಾ.22ರಂದು ಯುವತಿಯ ತಾಯಿ ಬಂದಿದ್ದಾರೆ. ಲೋಕನಾಥ್ ಸಿಂಗ್‌ಗೆ ಸೇರಿದ ಜಾಗಕ್ಕೆ ಬಂದು ಪಾರ್ಟಿ ಮಾಡಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಗಂಡ-ಹೆಂಡತಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಜತೆಯಲ್ಲಿದ್ದ ಗನ್‌ ಮ್ಯಾನ್‌ಗೆ ಶ್ರೀ ತರಲು ಹೇಳಿ ಕಳುಹಿಸಿದ್ದಾರೆ. ಮದ್ಯ ಸೇವಿಸಿದ್ದ ಅಳಿಯ ಲೋಕನಾಥ್ ಸಿಂಗ್‌ಗೆ ಅತ್ತೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದರು. ಅಳಿಯ ನಿದ್ದೆಗೆ ಜಾರಿದಾಗ ಹರಿತವಾದ ಆಯುಧದಿಂದ ಅತ್ತೆ ಅಳಿಯನ ಕುತ್ತಿಗೆ ಕೊಯ್ದಿದ್ದಾರೆ.ಅಮ್ಮ ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Related Articles

Back to top button
error: Content is protected !!