ರಾತ್ರಿ ಮನೆಯಲ್ಲಿ ಮಲಗಿದ್ದಲ್ಲಿಯೇ ತಂದೆ-ಮಗ ನಿಗೂಢ ಸಾವು: ಪತ್ನಿ ಕೈವಾಡ ಶಂಕೆ!
Views: 139
ಕನ್ನಡ ಕರಾವಳಿ ಸುದ್ದಿ: ಮನೆಯಲ್ಲಿ ಮಲಗಿದ್ದ ತಂದೆ-ಮಗ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಮನೆಯಲ್ಲಿ ಮಲಗಿದ್ದ ತಂದೆ-ಮಗ ಬೆಳಿಗ್ಗೆಯಾದರೂ ಎದ್ದಿಲ್ಲ. ಹೋಗಿ ನೋಡಿದಾಗ ತಂದೆ ಕಿವಿಯಿಂದ ರಕ್ತ ಬಂದಿರುವುದು ಕಂಡುಬಂದಿದೆ. ಇಬ್ಬರೂ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ.
ಬೆಂಗಳೂರಿನ ಚಿಕ್ಕಬಾಣಾವರದ ಮನೆಯಲ್ಲಿ ಈ ಘಟನೆ ನಡೆದಿದೆ. 33 ವರ್ಷದ ಅಭಿನಂದನ್ ಹಾಗೂ ಮಗ 5 ವರ್ಷದ ಯಧುವೀರ್ ಮೃತ ತಂದೆ-ಮಗ.
ಅಭಿನಂದನ್ ಮನೆಯವರು ಸೊಸೆ ಹರಿಣಿಯೇ ಕೊಲೆ ಮಾಡಿ ತನಗೇನೂ ಗೊತ್ತಿಲ್ಲದವಳಂತೆ ನಾಟಕವಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಮೂರು ತಿಂಗಳು ಮನೆ ಬಿಟ್ಟು ಹೋಗಿದ್ದಳು. ಎಲ್ಲವನ್ನೂ ಆಕೆಯ ತಾಯಿಯೇ ಹೇಳಿಕೊಟ್ಟು ಮಾಡಿಸುತ್ತಿದ್ದಾಳೆ. ತಾಯಿ ಹೇಳಿದಂತೆ ಮಗಳು ಕೇಳುತ್ತಾಳೆ. ಮೂರು ತಿಂಗಳ ಬಳಿಕ ಮನೆಗೆ ಬಂದಿದ್ದಾಳೆ. ಪತಿ-ಪತ್ನಿ ನಡುವೆ ಸದಾ ಕಿರಿಕಿಯಿತ್ತು. ಈಗ ಪತಿ ಹಾಗೂ ಮಗ ಇಬ್ಬರೂ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಇದರ ಹಿಂದೆ ಹರಿಣಿ ಕೈವಾಡವಿದೆ ಎಂದು ಅಭಿನಂದನ್ ತಾಯಿ ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.






