ಇತರೆ

ಮನೆಯ ಮೇಲೆ ನಿಯಂತ್ರಣ ತಪ್ಪಿ ಬಿದ್ದ ಲಾರಿ: ಚಾಲಕ ಸಾವು

Views: 29

ಕನ್ನಡ ಕರಾವಳಿ ಸುದ್ದಿ: ಲಾರಿಯೊಂದು ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಮಡಿಕೈ ಕಂಣಿರಪೊಯಿಲ್ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಚಾಯ್ಯೋಂ ನಿವಾಸಿ ಸಾದಿಕ್ (40) ಎಂದು ಗುರುತಿಸಲಾಗಿದೆ.

ಕಂಣಿರಪೊಯಿಲ್ ಕುಳಂಗಾಟ್ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಕೆಂಪು ಕಲ್ಲು ಹೇರಿಕೊಂಡು ಬಂದ ಲಾರಿ ಕಲ್ಲನ್ನು ಅನ್ ಲೋಡ್ ಮಾಡಿದ ಬಳಿಕ ಮುಂದಕ್ಕೆ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಸಮೀಪದ ಪಿ. ಗೋಪಾಲನ್ ಎಂಬವರ ಮನೆಯ ಮೇಲೆ ಉರುಳಿ ಬಿದ್ದಿದೆ.

ಅಪಘಾತದ ತೀವ್ರತೆಗೆ ಮನೆಯ ಅಡುಗೆ ಕೋಣೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಸಾದಿಕ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

Related Articles

Back to top button
error: Content is protected !!