ಸಾಮಾಜಿಕ

ಬೋಳು ತಲೆಯವ ಎಂದು ಪತ್ನಿ ಅಪಹಾಸ್ಯ ಮನನೊಂದು ಪತಿ ಆತ್ಮಹತ್ಯೆ 

Views: 99

ಕನ್ನಡ ಕರಾವಳಿ ಸುದ್ದಿ: ತಲೆಯಲ್ಲಿ ಕೂದಲಿಲ್ಲ, ಬೋಳು ತಲೆಯವ ಎಂದು ಪತ್ನಿ ಅಪಹಾಸ್ಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಗುಡಿಗಾಲದಲ್ಲಿ ಘಟನೆ ನಡೆದಿದೆ. ಪರಶಿವಮೂರ್ತಿ (30) ಆತ್ಮಹತ್ಯೆ ಮಾಡಿಕೊಂಡವರು. ಹೊರಗೆ ಹೋದರೆ ನನಗೆ ನಾಚಿಕೆ ಆಗುತ್ತದೆ, ಎಲ್ಲರೂ ಅಪಹಾಸ್ಯ ಮಾಡುತ್ತಾರೆ, ನನ್ನ ಗಂಡ ಅಂತ ಹೇಳೋಕೆ ಮುಜುಗರ ಆಗುತ್ತದೆ ಎಂದು ಪತ್ನಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಎರಡು ವರ್ಷದ ಹಿಂದೆ ಕಳಕಿಪುರದ ಮಮತಾ ಜತೆಗೆ ಯುವಕನಿಗೆ ಮದುವೆ ಆಗಿತ್ತು. ವಿವಾಹದ ಬಳಿಕ ಪರಶಿವಮೂರ್ತಿಗೆ ತಲೆ ಕೂದಲು ಉದುರಿತ್ತು. ತಲೆಯಲ್ಲಿ ಕೂದಲಿಲ್ಲ, ಬೋಳು ತಲೆಯವ ಎಂದು ಪತ್ನಿ ಅಪಹಾಸ್ಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪರಶಿವಮೂರ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೂ ಮೊದಲು ಪತ್ನಿ ಮಮತಾ, ಪತಿ ವಿರುದ್ಧ ವರದಕ್ಷಿಣೆ ಕಿರುಕುಳದ ಕೇಸ್ ಹಾಕಿದ್ದಳು. ಈ ಪ್ರಕರಣದಲ್ಲಿ ಪರಶಿವಮೂರ್ತಿ ಒಮ್ಮೆ ಜೈಲಿಗೆ ಹೋಗಿದ್ದ. ಸುಳ್ಳು ಕೇಸ್ ದಾಖಲಿಸಿ ಪತಿಯನ್ನು ಜೈಲಿಗೆ ಕಳಿಸಿದ್ದಲ್ಲದೇ ಈ ವಿಚಾರವನ್ನು ವಾಟ್ಸ್‌ ಸ್ಟೇಟಸ್‌ ಹಾಕುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಪದೇಪದೇ ಜಗಳ ಆಗುತ್ತಿತ್ತು ಎನ್ನಲಾಗಿದೆ.

Related Articles

Back to top button