ಯುವಜನ

ಟಿಕ್‌ಟಾಕ್‌ ಚಾಲೆಂಜ್‌ ತೆಗೆದುಕೊಂಡ ಬಾಲಕಿ ಮೂಗಿನ ಬಳಿ ವಾಸನೆ ಎಳೆದುಕೊಂಡು ಸಾವು! 

Views: 129

ಕನ್ನಡ ಕರಾವಳಿ ಸುದ್ದಿ: ಸೋಶಿಯಲ್ ಮೀಡಿಯಾ ಚಾಲೆಂಜ್‍ನಲ್ಲಿ ಭಾಗವಹಿಸಿದ ನಂತರ 11 ವರ್ಷದ ಬಾಲಕಿ ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬ್ರೆಜಿಲ್‍ನ ಪೆರ್ನಾಂಬುಕೊ ರಾಜ್ಯದ ಬೊಮ್ ಜಾರ್ಡಿಮ್ ನಿವಾಸಿ ಬ್ರೆಂಡಾ ಸೋಫಿಯಾ ಮೆಲೊ ಡಿ ಸ್ಯಾಂಟನಾ ಎಂಬ ಬಾಲಕಿ ಟಿಕ್ ಟಾಕ್ ಚಾಲೆಂಜ್‍ವೊಂದರಲ್ಲಿ ಭಾಗವಹಿಸಿ ಜೀವ ಕಳೆದುಕೊಂಡ ದಾರುಣವಾದ ಘಟನೆಯೊಂದು ನಡೆದಿದೆ.

ಈ ಚಾಲೆಂಜ್‍ನಲ್ಲಿ ಬಾಲಕಿ ಡಿಯೋಡರೆಂಟ್ ಅನ್ನು ಮೂಗಿನ ಬಳಿ ಇಟ್ಟುಕೊಂಡು ಕೆಲವು ನಿಮಿಷಗಳ ಕಾಲ ಅದರ ವಾಸನೆ ಎಳೆದುಕೊಂಡಿದ್ದಾಳೆ. ಈಗಾಗಲೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆಕೆಗೆ ಡಿಯೋಡರೆಂಟ್ ವಾಸನೆಯನ್ನು ತೆಗೆದುಕೊಳ್ಳುತ್ತಿದ್ದಂತೆ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದೆಯಂತೆ.ಆಕೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದೆ ಆಕೆ ಸಾವನ್ನಪ್ಪಿದ್ದಾಳೆ.

ಸೋಶಿಯಲ್ ಮೀಡಿಯಾದಲ್ಲಿ ಇಂತಹ ಚಾಲೆಂಜ್‍ನಿಂದ ಯುವ ಜನಾಂಗದವರು ಸಾವನಪ್ಪಿದ್ದು ಇದೇ ಮೊದಲಲ್ಲ. ಈ ಹಿಂದೆ ಟಿಕ್ ಟಾಕ್ ಚಾಲೆಂಜ್‍ನಲ್ಲಿ ಭಾಗವಹಿಸಿದ್ದ 11 ವರ್ಷದ ಬಾಲಕನೊಬ್ಬ ದುರಂತವಾಗಿ ಸಾವಿಗೀಡಾಗಿದ್ದ. ಟಾಮಿ-ಲೀ ಗ್ರೇಸಿ ಬಿಲ್ಲಿಂಗ್ಟನ್ ಎಂಬ ಬಾಲಕ ಲ್ಯಾಂಕಾಸ್ಟರ್‌ನ ಗ್ರೀನ್ಸೆಟ್ ಕ್ಲೋಸ್‍ನಲ್ಲಿರುವ ಸ್ನೇಹಿತನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.

ಹಾಗೇ ಕಳೆದ ವರ್ಷ ಟಿಕ್ ಟಾಕ್‍ನಲ್ಲಿ ವೈರಲ್ ಆಗುತ್ತಿರುವ ಚಾಲೆಂಜ್‍ಗೆ ಅರ್ಜೆಂಟೀನಾದ ಯುವತಿಯೊಬ್ಬಳು ಬಲಿಪಶುವಾಗಿದ್ದಳು.

ಇತ್ತೀಚೆಗೆ ಭಾರತ ಸರ್ಕಾರವು ರಾಷ್ಟ್ರೀಯ ಭದ್ರತಾ ಸಲುವಾಗಿ ಕೆಲ ಚೀನಾದ ಆಪ್‌ಗಳನ್ನು ನಿಷೇಧಿಸಿತ್ತು. ಅದರಲ್ಲಿ ಟಿಕ್‌ಟಾಕ್‌ ಕೂಡ ಸೇರಿತ್ತು. ಇದೀಗ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡ ಅದೇ ನಿರ್ಧಾರವನ್ನು ಕೈಗೊಂಡಿದೆ. ಈಗ ಅಮೆರಿಕದಲ್ಲಿ ಸಹ ಟಿಕ್‌ಟಾಕ್ ಸ್ಥಗಿತಗೊಂಡಿದೆ. ಅಮೆರಿಕದಲ್ಲಿರುವ ಟಿಕ್‌ಟಾಕ್ ಬಳಕೆದಾರರು ಟಿಕ್‌ಟಾಕ್ ಆ್ಯಪ್ ಅನ್ನು ಓಪನ್ ಮಾಡಿದಾಗ ಟಿಕ್‌ಟಾಕ್ ಪ್ರಸ್ತುತ ಲಭ್ಯವಿಲ್ಲ ಎಂಬ ಸಂದೇಶವನ್ನು ಪಡೆಯುತ್ತಿದ್ದಾರೆ. ಅಮೆರಿಕದಲ್ಲಿ ಟಿಕ್-ಟಾಕ್‌ನ 17 ಕೋಟಿಗೂ ಹೆಚ್ಚು ಬಳಕೆದಾರರಿದ್ದು, ಟಿಕ್‌ಟಾಕ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಿಂದಲೂ ತೆಗೆದುಹಾಕಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

Related Articles

Back to top button