ಮಹಿಳೆ ವೇಷದಲ್ಲಿ ಪ್ರಿಯತಮೆಯ ಮನೆಗೆ ನುಗ್ಗಿ ಬೆಂಕಿ ಹಚ್ಚಿದ ಪ್ರಿಯಕರ!

Views: 91
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನೊಬ್ಬ ಮಹಿಳೆಯ ವೇಷದಲ್ಲಿ ತನ್ನ ಪ್ರಿಯತಮೆಯ ಮನೆಗೆ ಬಂದು ಬೆಂಕಿ ಹಚ್ಚಿರೋ ಆಘಾತಕಾರಿ ಘಟನೆಯೊಂದು ಸಂಭವಿಸಿದೆ.
ಮಥುರಾ ಹಸನ್‌ಪುರ ಗ್ರಾಮದ ನಿವಾಸಿ ಉಮೇಶ್ ಎಂಬ ವ್ಯಕ್ತಿಯು ರೇಖಾಳನ್ನು ತುಂಬಾ ಪ್ರೀತಿಸುತ್ತಿದ್ದ. ಈ ಹಿಂದೆ ರೇಖಾ ಉಮೇಶ್ ಜೊತೆ ಮನೆಬಿಟ್ಟು ಓಡಿ ಹೋಗಿದ್ದಳಂತೆ. ಇದಾದ ಬಳಿಕ ಪೊಲೀಸರ ಹುಡುಕಾಟದಿಂದ ರೇಖಾ ಪತ್ತೆಯಾಗಿದ್ದಳು.
ಇನ್ನೂ, ಉಮೇಶ್ನನ್ನು ಬಿಟ್ಟು ಬಂದ ರೇಖಾಳಿಗೆ ಕುಟುಂಬಸ್ಥರು ಮತ್ತೊಂದು ಮದುವೆ ಮಾಡಿಸಿದ್ದರು. ಇದಾದ ಬಳಿಕ ರೇಖಾ ಎಲ್ಲವನ್ನು ಮರೆತು ಪತಿ ಹಾಗೂ ಮಕ್ಕಳ ಜೊತೆಗೆ ಸುಖ ಸಂಸಾರ ನಡೆಸುತ್ತಿದ್ದಳು.
ಪತಿ ಮತ್ತು ಮಕ್ಕಳು ಇಲ್ಲದ ಸಮಯವನ್ನು ನೋಡಿಕೊಂಡು ಉಮೇಶ್ ಲೆಹೆಂಗಾ ಧರಿಸಿ ಟೆರೇಸ್ ಮೂಲಕ ಮನೆಯೊಳಗೆ ಬಂದಿದ್ದಾನೆ. ಆಗ ತನ್ನೊಂದಿಗೆ ಬಾ ಅಂತ ಕೇಳಿಕೊಂಡಿದ್ದಾನೆ. ಆದ್ರೆ ರೇಖಾ ಅದಕ್ಕೆ ನಿರಾಕರಿಸಿದ್ದಾಳೆ. ರೇಖಾ ಮಾತನ್ನು ಕೇಳುತ್ತಿದ್ದಂತೆ ಏಕಾಏಕಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಆಕೆಗೆ ಬೆಂಕಿ ಹಚ್ಚಿದ್ದಾನೆ.
ಬೆಂಕಿ ಹಚ್ಚುತ್ತಿದ್ದಂತೆ ರೇಖಾ ತನ್ನ ರಕ್ಷಣೆಗಾಗಿ ಕಿರುಚಾಡಿದ್ದಾಳೆ. ಆಕೆ ಧ್ವನಿ ಕೇಳುತ್ತಿದ್ದಂತೆ ನೆರೆಹೊರೆಯವರು ಆಕೆಯ ಸಹಾಯ ಧಾವಿಸಿದರು, ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ. ಆ ಕೂಡಲೇ ಆರೋಪಿ ಉಮೇಶ್ ಟೆರೇಸ್‌ನಿಂದ ಹಾರಿ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಆದ್ರೆ ಎಸ್ಕೇಪ್ ಆಗುವ ಬರದಲ್ಲಿ ಆರೋಪಿ ತನ್ನನ್ನು ತಾನೇ ಗಾಯಮಾಡಿಕೊಂಡು ಸಿಕ್ಕಿಬಿದ್ದಿದ್ದಾನೆ. ಹೀಗಾಗಿ ರೇಖಾ ಹಾಗೂ ಆರೋಪಿ ಉಮೇಶ್ನನ್ನು ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಉಮೇಶ್ ಆಗಾಗ ರೇಖಾಳ ಮನೆಗೆ ಭೇಟಿ ನೀಡುತ್ತಿದ್ದನಂತೆ. ಕಳೆದ ವರ್ಷ ಆಗಸ್ಟ್ 31 ರಂದು, ರೇಖಾ ಉಮೇಶ್ ಜೊತೆಗೆ ಮನೆಯಿಂದ ಓಡಿ ಹೋಗಿದ್ದಳಂತೆ. ಇದಾದ ಬಳಿ ಈ ವಿಚಾರ ತಿಳಿದ ಆಕೆಯ ಕುಟುಂಬಸ್ಥರು ಮಗಳು ಕಾಣೆಯಾಗಿದ್ದಾಳೆಂದು ದೂರು ನೀಡಿದ್ದು. ಮತ್ತೆ ಫೆಬ್ರವರಿ 10 ರಂದು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ರೇಖಾಳನ್ನು ಮತ್ತೆ ಕುಟುಂಬಸ್ಥರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಘಟನೆಯ ನಂತರ, ರೇಖಾ ತನ್ನ ತಪ್ಪನ್ನು ಅರಿತುಕೊಂಡು ಉಮೇಶ್‌ನಿಂದ ದೂರವಾಗಿದ್ದಳಂತೆ. ಇದೇ ಕೋಪದಲ್ಲಿ ಆಕೆಯ ಪ್ರಾಣ ತೆಗೆಯಲು ಪ್ರಯತ್ನಿಸಿದ್ದಾನೆ ಎಂದಿದ್ದಾರೆ.