ಇತರೆ
ಬ್ರಹ್ಮಾವರ: ಬೈಕ್ -ಕಂಟೈನರ್ ಡಿಕ್ಕಿ:ಸಹಸವಾರೆ ಸಾವು

Views: 137
ಕನ್ನಡ ಕರಾವಳಿ ಸುದ್ದಿ: ಬೈಕ್‌ನಲ್ಲಿ ದಂಪತಿ ಸಂಚರಿಸುತ್ತಿದ್ದ ವೇಳೆ ಕಂಟೈನರ್ ಡಿಕ್ಕಿಯಾಗಿ ಗಾಯಗೊಂಡ ಪತ್ನಿ ನಾಗವೇಣಿ (30)ಮೃತಪಟ್ಟಿದ್ದಾರೆ.
ಪತಿ ಸತೀಶ್ ಪತ್ನಿ ನಾಗವೇಣಿಯನ್ನು ಕುಳ್ಳಿರಿಸಿಕೊಂಡು ಬೈಂದೂರಿನಿಂದ ಮಣಿಪಾಲಕ್ಕೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿದ್ದಾಗ ಬ್ರಹ್ಮಾವರ ಹೇರೂರು ಗ್ರಾಮದ ಶೆಟ್ಟಿಗಾರ್ ಇಂಡಸ್ಟ್ರೀಸ್ ಬಳಿ ತಲುಪುವಾಗ ಹಿಂದುಗಡೆಯಿಂದ ಕಂಟೈನರ್ ಅತಿ ವೇಗದಿಂದ ಬಂದು ಬೈಕ್ ಗೆ ಡಿಕ್ಕಿ ಹೊಡೆದು ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈರ್ವರೂ ರಸ್ತೆಗೆ ಬಿದ್ದು ಗಾಯಗೊಂಡರು. ಮುಖ, ತಲೆಗೆ ತೀವ್ರ ಗಾಯಗೊಂಡ ನಾಗವೇಣಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






