ಇತರೆ

ನಕ್ಸಲ್ ಆಪರೇಷನ್ ಮುಗಿಸಿ ವಾಪಸ್ ಬರುವಾಗ ವಾಹನ ಸ್ಪೋಟ: 9 ಮಂದಿ ಯೋಧರು ಹುತಾತ್ಮ

Views: 362

ಕನ್ನಡ ಕರಾವಳಿ ಸುದ್ದಿ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ನಕ್ಸಲರ ಗುಂಪು ಪೊಲೀಸ್‌ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನವನ್ನು ಸುಧಾರಿತ ಸ್ಫೋಟಕ ಸಾಧನದಿಂದ ಸ್ಫೋಟಿಸಿದೆ.

ಘಟನೆಯಲ್ಲಿ ಈವರೆಗೆ ಕನಿಷ್ಠ 9 ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಬಿಜಾಪುರ ಜಿಲ್ಲೆಯ ಬೆದ್ರೆ-ಕುಟ್ರು ರಸ್ತೆಯಲ್ಲಿ ಈ ಸ್ಫೋಟ ಸಂಭವಿಸಿದೆ.

ಘಟನೆಯಲ್ಲಿ ಎಂಟು ಜವಾನರು ಮತ್ತು ಚಾಲಕ ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಿಂದ ಹಿಂದಿರುಗುತ್ತಿದ್ದ ಕನಿಷ್ಠ 20 ಸೈನಿಕರನ್ನು ವಾಹನವು ಹೊತ್ತೊಯ್ಯುತ್ತಿತ್ತು.

ನಕ್ಸಲ್ ಹಾಗೂ ಸೈನಿಕರ ಸಂಘರ್ಷ ತಣ್ಣಗಾಯ್ತು ಎನ್ನುವಷ್ಟರಲ್ಲೇ ಛತ್ತೀಸ್‌ಗಢದಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ನಡೆದಿದೆ. ಇತ್ತೀಚೆಗೆ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಗೆ ಅತಿ ದೊಡ್ಡ ಪ್ರತೀಕಾರ ತೀರಿಸಿಕೊಳ್ಳಲಾಗಿದೆ.

ಸೈನಿಕರು ಇಂದು ಬೆಳಗ್ಗೆಯಷ್ಟೇ ಛತ್ತೀಸ್‌ಗಢದ ಅಬುಜ್ಮದ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಇಬ್ಬರು ಮಹಿಳೆಯರು ಸೇರಿ ಐವರನ್ನ ಬಲಿ ಪಡೆದಿದ್ದರು. ನಕ್ಸಲ್ ಆಪರೇಷನ್ ಮುಗಿಸಿ ವಾಪಸ್ ಆಗುತ್ತಿದ್ದಾಗ ಮಧ್ಯಾಹ್ನ 2.15ಕ್ಕೆ ಸೇನಾ ವಾಹನವನ್ನೇ ಗುರಿಯಾಗಿಸಿ ಐಇಡಿ ಬ್ಲಾಸ್ಟ್ ಮಾಡಲಾಗಿದೆ.

Related Articles

Back to top button
error: Content is protected !!