ಯುವಜನ

ಪ್ರೀತಿಸಿದವರ ಜತೆ ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಇಬ್ಬರು ವಿವಾಹಿತ ಪ್ರೇಮಿಗಳು ಆತ್ಮಹತ್ಯೆ

Views: 118

ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಇಬ್ಬರು ವಿವಾಹಿತ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದ ಸೃಷ್ಟಿ(20) ಮೃತ ಗೃಹಿಣಿಯಾಗಿದ್ದು, ಬನ್ನಹಳ್ಳಿ ಗ್ರಾಮದ ಪ್ರಸನ್ನ (25) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಕಳೆದ ಕೆಲ ವರ್ಷಗಳಿಂದ ಪ್ರಸನ್ನ ಹಾಗೂ ಸೃಷ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಈ ಗ್ಯಾಪ್ ನಲ್ಲಿ ಪ್ರಸನ್ನ ಸೃಷ್ಟಿಯ ಸ್ನೇಹಿತೆ ಸ್ಪಂದನ ಎಂಬುವವರನ್ನು ಪ್ರೀತಿಸುತ್ತಿದ್ದ ಇದಾಗಿ ಕೆಲ ತಿಂಗಳಲ್ಲೇ ದಿನೇಶ್ ಎಂಬುವವರ ಜೊತೆ ಸೃಷ್ಟಿಯ ಮದುವೆಯಾಗುತ್ತದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು, ಆದರೆ ಕಾಲಕ್ರಮೇಣ ಸೃಷ್ಟಿ ಹಾಗೂ ಪ್ರಸನ್ನ ನಡುವೆ ಮತ್ತೆ ಪ್ರೇಮ ಉಂಟಾಗಿದ್ದು, ಪ್ರಸನ್ನ ಸೃಷ್ಟಿ ನಡುವೆ ಪ್ರೀತಿ ಮಾತುಕತೆ ನಡೆಯುತ್ತಿತ್ತು.

ಈ ವಿಚಾರಕ್ಕೆ ಸೃಷ್ಟಿ ಹಾಗೂ ಪತಿ ದಿನೇಶ್ ನಡುವೆ ದಿನವೂ ಜಗಳವಾಗುತ್ತಾ ಇತ್ತು. ಇದರಿಂದ ಮನನೊಂದ ಸೃಷ್ಟಿ ಡಿ.11 ರಂದು ಪತಿ ಮನೆಯಿಂದ ನಾಪತ್ತೆಯಾಗಿದ್ದಳು. ಪತ್ನಿ ನಾಪತ್ತೆ ಬೆನ್ನಲ್ಲೇ ದಿನೇಶ್ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಇದಾಗಿ ಐದು ದಿನಗಳ ಬಳಿಕ ಶಿಂಷಾ ನದಿಯಲ್ಲಿ ಯುವತಿಯೊಬ್ಬಳ ಶವ ಪತ್ತೆಯಾಗಿದ್ದು, ಈ ವೇಳೆ ಪರಿಶೀಲನೆ ನಡೆಸಿದಾಗ ಮೃತದೇಹ ಸೃಷ್ಟಿಯದ್ದು ಎಂದು ಗೊತ್ತಾಗುತ್ತದೆ. ಸೃಷ್ಟಿಯ ಸಾವಿಗೆ ಕಾರಣ ಯಾರು ಎಂದು ತನಿಖೆ ನಡೆಸಲು ಪೊಲೀಸರು ಮುಂದಾದಾಗ ಪ್ರಸನ್ನ ಆತನ ಮನೆಯಲ್ಲಿ ನೇಣಿಗೆ ಶರಣಾಗಿದ್ದ.

ಸದ್ಯ ಪ್ರಸನ್ನ ಹಾಗೂ ಸೃಷ್ಟಿಯ ಪ್ರೀತಿಗೆ ದಿನೇಶ್ ಹಾಗೂ ಸ್ಪಂದನರ ಜೀವನ ಕತ್ತಲಾಗಿದೆ. ಇನ್ನು ವಿವಾಹಿತ ಪ್ರೇಮಿಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Related Articles

Back to top button
error: Content is protected !!