ಸಾಮಾಜಿಕ
ಒಂದೇ ದಿನ ಸಾವಿನಲ್ಲೂ ಒಂದಾದ ದಂಪತಿ!

Views: 170
ಚಿತ್ರದುರ್ಗ: ಸಾವಿನಲ್ಲೂ ದಂಪತಿ ಒಂದಾದ ಹೃದಯವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ಸೋಮವಾರ ನಡೆದಿದೆ.
ಪತಿಗೆ ಹೃದಯಾಘಾತದ ಸುದ್ದಿ ತಿಳಿದು ಆಘಾತಗೊಂಡ ಪತ್ನಿ ಕೂಡ ಹಾರ್ಟ್ ಅಟ್ಯಾಕ್ನಿಂದ ಸಾವನ್ನಪ್ಪಿದ್ದಾರೆ. ಚಿತ್ರದುರ್ಗದ ಕೆಳಗೋಟೆ ಬಡಾವಣೆಯಲ್ಲಿ ವಾಸವಾಗಿದ್ದ ಓಂಕಾರಮೂರ್ತಿ(66), ಅವರ ಪತ್ನಿ ದ್ರಾಕ್ಷಾಯಣಿ ಸಾವಿನಲ್ಲೂ ಒಂದಾದ ದಂಪತಿ.
ನಿವೃತ್ತ ಲೈಬ್ರರಿಯನ್ ಆಗಿದ್ದ ಓಂಕಾರಮೂರ್ತಿ ಅವರಿಗೆ ಸೋಮವಾರ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸುದ್ದಿಯನ್ನು ಮನೆಯಲ್ಲಿದ್ದ ಅವರ ಪತ್ನಿ ದ್ರಾಕ್ಷಾಯಣಿ ಅವರಿಗೆ ರವಾನಿಸಲಾಗಿತ್ತು. ಪತಿಗೆ ಹೃದಯಾಘಾತವಾದ ಸುದ್ದಿ ತಿಳಿದು ಪತ್ನಿ ಆಘಾತಗೊಂಡಿದ್ದರು. ನಂತರ ಅವರಿಗೂ ಹೃದಯಾಘಾತವಾಗಿ, ಸಾವನ್ನಪ್ಪಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅವರ ಪತಿ ಕೂಡ ಮೃತಪಟ್ಟಿದ್ದಾರೆ.ಈ ರೀತಿ ಒಟ್ಟಿಗೆ ದುಃಖ ಬರೋದು ಬಹಳ ವಿರಳ.






