ಜನಮನ

SSLC, ITI ಆದವರಿಗೆ ರೈಲ್ವೆ ಇಲಾಖೆಯಲ್ಲಿ 3 ಸಾವಿರಕ್ಕೂ ಅಧಿಕ ಉದೋಗಾವಕಾಶ, ಪರೀಕ್ಷೆ ಇಲ್ಲದೆ ಆಯ್ಕೆ!

Views: 128

ಪೂರ್ವ ರೈಲ್ವೆ ಇಲಾಖೆಯಲ್ಲಿ  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತಿ ಹೊಂದಿರುವ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಪೂರ್ವ ರೈಲ್ವೆ ಕಾಲ್ ಮಾಡಿರುವ ವಿವಿಧ ಹುದ್ದೆಗಳಿಗೆ ಅರ್ಜಿಗಳು ಈಗಾಗಲೇ ಆರಂಭವಾಗಿದ್ದು ಮಹಿಳೆಯರು, ಪುರುಷರು ಇಬ್ಬರಿಗೂ ಅವಕಾಶವಿದೆ. ಸೆಪ್ಟೆಂಬರ್ 09ರಂದು ಅಪ್ರೆಂಟಿಸ್ ಪೋಸ್ಟ್‌ಗಳಿಗೆ ನೋಟಿಫಿಕೇಶನ್ ಅನ್ನು ಇಲಾಖೆ ಬಿಡುಗಡೆ ಮಾಡಿತ್ತು. ಇದೇ 24 ರಿಂದ ಅರ್ಜಿಗಳು ಆರಂಭವಾಗಿವೆ. ಕೊನೆಯ ದಿನಾಂಕ ಅಕ್ಟೋಬರ್ 23 ಆಗಿದೆ.

ಶೈಕ್ಷಣಿಕ ಅರ್ಹತೆ

10ನೇ ತರಗತಿ,ಐಟಿಐ ಪೂರ್ಣವಾಗಿರಬೇಕು

ಹುದ್ದೆಗಳು ಫಿಟ್ಟರ್, ವೆಲ್ಡರ್, ಮಿಷನಿಸ್ಟ್, ಕಾರ್ಪೆಂಟರ್, ಪೈಂಟರ್, ಲೈನ್ಮ್ಯಾನ್, ವೈರ್ಮ್ಯಾನ್ ಹಾಗೂ ಎಲೆಕ್ಟ್ರಿಷನ್ ಸೇರಿದಂತೆ ಇನ್ನಿತರ ಉದ್ಯೋಗಗಳು.

ಒಟ್ಟು ಹುದ್ದೆಗಳು

3,115 ಅಪ್ರೆಂಟಿಸ್ ಪೋಸ್ಟ್‌ಗಳು

ಅರ್ಜಿಗೆ ಶುಲ್ಕ

ಜನರಲ್, ಒಬಿಸಿ, ಇಡಬ್ಲುಎಸ್- 100 ರೂಪಾಯಿಗಳು

ಎಸ್ಸಿ, ಎಸ್ಟಿ, ಪಿಡಬ್ಲುಡಿ, ಮಹಿಳೆಯರಿಗೆ ಶುಲ್ಕವಿಲ್ಲ

ಅಭ್ಯರ್ಥಿಗಳು ಆನ್ಲೈನ್ ಮೂಲಕ ಹಣ ಪಾವತಿ ಮಾಡಿ

ವಯಸ್ಸಿನ ಮಿತಿ 

15 ರಿಂದ 24 ವರ್ಷದ ಒಳಗಿನವರಿಗೆ ಅವಕಾಶ

ಆಯ್ಕೆ ಪ್ರಕ್ರಿಯೆ

10ನೇ ತರಗತಿ ಹಾಗೂ ಐಟಿಐನಲ್ಲಿ ಪಡೆದಂತ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧ ಮಾಡಲಾಗುತ್ತದೆ. ಇದರಲ್ಲಿ ಆಯ್ಕೆ ಆದವರ ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಇರುತ್ತದೆ. ಇದಾದ ಮೇಲೆ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- ಅಕ್ಟೋಬರ್ 23, 2024

ಹುದ್ದೆಗೆ ಸಂಬಂಧಿಸಿದ ಲಿಂಕ್- https://rrcrecruit.co.in/ActAprt2425Vdt01/Notification_2425.pdf

Related Articles

Back to top button
error: Content is protected !!