ಜನಮನ

ದುರಂತ ಅಂತ್ಯ ಕಂಡ ಜೀವದಾನಿ ಕುಂದಾಪುರ ಮೂಲದ ಉಪನ್ಯಾಸಕಿ ಅರ್ಚನಾ ಕಾಮತ್ !..ಏನಿದು ಲಿವರ್ ದಾನ?

Views: 795

ಕುಂದಾಪುರ :ಮಂಗಳೂರಿನ ಬೊಂದೇಲ್ ಎಂಬಲ್ಲಿರುವ ಮಣೆಲ್‌ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ಉಪನ್ಯಾಸಕಿ ಅರ್ಚನಾ ಕಾಮತ್ ವಿದ್ಯಾರ್ಥಿಗಳೊಂದಿಗೆ ಸಹೋದ್ಯೋಗಿಗಳೊಂದಿಗೆ ತುಂಬಾ ಲವಲವಿಕೆಯಿಂದ ಇರುತ್ತಿದ್ದ ಅರ್ಚನಾ. ಈಗ ಇಲ್ಲ ಅನ್ನೋದನ್ನು ಕಾಲೇಜಿನ ಸಹೋದ್ಯೋಗಿಗಳಿಗೆ ನಂಬಲು ಸಾಧ್ಯವಾಗುತ್ತಿಲ್ಲ.ಮತ್ತೊಬ್ಬರ ಜೀವಕ್ಕಾಗಿ ಮಿಡಿದಾಕೆಯನ್ನೇ ವಿಧಿ ಬಲಿಪಡೆದುಕೊಂಡಿರೋದು ಎಲ್ಲರಿಗೂ ಆಘಾತ ತಂದಿದೆ.

ಅರ್ಚನಾ ಮೂಲತಃ ಕುಂದಾಪುರದವರಾಗಿದ್ದು ಮಂಗಳೂರಿಗೆ ಮದುವೆಯಾಗಿ ಹೋಗಿದ್ದರು. ಅರ್ಚನಾ ಮೃತ ದೇಹವನ್ನು ಕರಂಗಲ್ಪಾಡಿಯ ನಿವಾಸಕ್ಕೆ ತಂದು ವಿಧಿ ವಿಧಾನ ಪೂರೈಸಿದ ಬಳಿಕ ಕುಂದಾಪುರದ ಕೋಟೇಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅರ್ಚನಾ ಕಾಮತ್ ಅವರ ಅಕಾಲಿಕ ನಿಧನದಿಂದ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.

ಮಂಗಳೂರಿನ ಕಂರಗಲ್ಪಾಡಿಯ ಈ ಅರ್ಚನಾ ಕಾಮತ್ ತನ್ನ ಲಿವರ್‌ ಅನ್ನು ದಾನ ಮಾಡಿದ ಕೇವಲ ಎರಡೇ ವಾರಕ್ಕೆ ಹಠಾತ್ ಸಾವನ್ನಪ್ಪಿದ್ದಾರೆ. ನಾಲ್ಕು ವರ್ಷದ ಪುಟ್ಟ ಮಗು ಕೂಡ ಈಗ ಅಮ್ಮನಿಲ್ಲದೆ ರೋದಿಸುವಂತಾಗಿದೆ.

ಮಂಗಳೂರಿನ ಉಪನ್ಯಾಸಕಿ ಲಿವರ್ ದಾನ ಮಾಡಿದ ಬಳಿಕ ಹಠಾತ್ ಸಾವನ್ನಪ್ಪಿರೋ ಸುದ್ದಿ ಎಲ್ಲರಲ್ಲೂ ಆಘಾತ ತಂದಿದೆ. ಹಾಗಾದ್ರೆ, ಈ ಲಿವರ್ ಡೊನೇಷನ್ ಹೇಗೆ ನಡೆಯುತ್ತೆ? ಆಪರೇಷನ್ ಹೇಗಿರುತ್ತೆ? ಲಿವರ್ ಕೊಟ್ಟವರಿಗೆಲ್ಲಾ ಆಪತ್ತು ಇರುತ್ತಾ? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

ಲಿವರ್ ದಾನ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದ ಮೂರೇ ದಿನಕ್ಕೆ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಗೆ ತಂದು ದಾಖಲಿಸಿದ ಕೆಲ ದಿನದಲ್ಲೇ ಬಹು ಅಂಗಾಂಗ ವೈಫಲ್ಯವಾಗಿ ದಾರುಣ ಸಾವು ಕಂಡಿದ್ದಾರೆ.

ಮಂಗಳೂರಿನಲ್ಲಿ ಉಪನ್ಯಾಸಕಿಯಾಗಿದ್ದ ಅರ್ಚನಾ ಕಾಮತ್ ಅವ್ರು ಇದೊಂದು ವಿಚಾರದಲ್ಲಿಯಷ್ಟೇ ಮಾನವೀಯತೆ ಮೆರೆದಿದ್ರು ಅನ್ಕೋಬೇಡಿ. ತಮ್ಮ ಇಡೀ ಜೀವನದ ಉದ್ದಕ್ಕೂ ಕಷ್ಟ ಎಂದವರಿಗೆ ಮಿಡಿಯುತ್ತಿದ್ದ ಜೀವ ಇದು ಅನ್ನೋದು ಎಲ್ಲರ ಮಾತು. ಇಂತಹ ಪರೋಪಕಾರಿ ಹೆಣ್ಣುಮಗಳ ಸಾವು ಎಂಥವರಿಗೂ ಆಘಾತವೇ ಸರಿ.

ಈ ಘಟನೆಯಲ್ಲಿ ಎಲ್ಲರಿಗೂ ಕಾಡೋ ಅತಿಮುಖ್ಯ ಪ್ರಶ್ನೆ ಅಂದ್ರೆ ಲಿವರ್ ದಾನ ಮಾಡಿದ್ದೇ ಅರ್ಚನಾ ಜೀವಕ್ಕೆ ಕುತ್ತು ತಂದಿತಾ ಅನ್ನೋದು. ಸದ್ಯಕ್ಕೆ ತಿಳಿದು ಬಂದಿರೋ ಮಾಹಿತಿ ಪ್ರಕಾರ ಲಿವರ್ ದಾನ ಮಾಡಿದ ಬಳಿಕ ಅರ್ಚನಾರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಇದು ದೇಹದ ಬೇರೆ ಬೇರೆ ಅಂಗಗಳಿವೂ ವ್ಯಾಪಿಸಿ ಸಾವು ಸಂಭವಿಸಿದೆ ಎಂಬ ಮಾಹಿತಿಯಿದೆ.

ನಾವು ಮೊದಲೇ ಹೇಳಿದ ಹಾಗೆ ಕಿಡ್ನಿ ದಾನ ಬೇರೆ.. ಲಿವರ್ ದಾನ ಬೇರೆ. ದೇಹದಲ್ಲಿ ಎರಡೆರಡು ಕಿಡ್ನಿಗಳಿರುತ್ತವೆ. ಹಾಗಾಗಿ, ಒಂದು ಕಿಡ್ನಿಯನ್ನು ಸಂಪೂರ್ಣವಾಗಿ ತೆಗೆದು ಅಗತ್ಯವಿರೋ ರೋಗಿಗೆ ಹಾಕಲಾಗುತ್ತೆ. ಒಬ್ಬ ವ್ಯಕ್ತಿ ಒಂದು ಕಿಡ್ನಿಯಲ್ಲೂ ತಕ್ಕಮಟ್ಟಿಗೆ ಜೀವನ ಸಾಗಿಸಬಹುದು. ಆದ್ರೆ, ಲಿವರ್ ಟ್ರಾನ್ಸ್‌ಪ್ಲಾಂಟ್‌ನಲ್ಲಿ ಹಾಗೆ ಆಗೋದಿಲ್ಲ. ಲಿವರ್ ಟ್ರಾನ್ಸ್‌ಪ್ಲಾಂಟ್ ಅಂದ್ರೆ ಒಬ್ಬ ವ್ಯಕ್ತಿಯ ಲಿವರ್ ಅನ್ನು ಸಂಪೂರ್ಣವಾಗಿ ತೆಗೆದು ರೋಗಿಯ ದೇಹಕ್ಕೆ ಕಸಿ ಮಾಡುವುದಿಲ್ಲ. ಬದಲಾಗಿ, ಲಿವರ್‌ನ ಒಂದು ಭಾಗವನ್ನು ಮಾತ್ರ ಕತ್ತರಿಸಿಕೊಂಡು ಅಗತ್ಯವಿರೋ ರೋಗಿಯ ದೇಹಕ್ಕೆ ಕಸಿ ಮಾಡಲಾಗುತ್ತೆ.

ಲಿವರ್ ನ ಒಂದು ಭಾಗ ಕಟ್ ಮಾಡಿಬಿಟ್ಟರೆ ಆರೋಗ್ಯವಂತ ರೋಗಿಗೂ ತೊಂದರೆ ಆಗುವುದಿಲ್ಲವೇ ಅಂತ ನೀವು ಕೇಳಬಹುದು. ಯಾಕಂದ್ರೆ ಲಿವರ್ ಬೇರೆ ಅಂಗಾಂಗಳಂತಲ್ಲ. ಲಿವರ್‌ನ ಒಂದು ಭಾಗವನ್ನು ಕತ್ತರಿಸಿದರೆ ಅದು ಮತ್ತೆ ಬೆಳೆಯುತ್ತೆ. ವಾರಗಳ ಅಂತರದಲ್ಲಿ ಮತ್ತೆ ಮೊದಲಿನ ಸ್ಥಿತಿಗೆ ಬರುತ್ತೆ. ದಾನಿಯ ಲಿವರ್‌ನಿಂದ ಕತ್ತರಿಸಿ ತೆಗೆದ ಭಾಗವನ್ನು ರೋಗಿಯ ದೇಹಕ್ಕೆ ಕಸಿ ಮಾಡಿದ ಬಳಿಕ. ಆ ರೋಗಿಯ ದೇಹದಲ್ಲಿ ಲಿವರ್ ಹಂತ ಹಂತವಾಗಿ ಬೆಳೆಯುತ್ತಾ ಹೋಗುತ್ತೆ. ತಿಂಗಳುಗಳ ಅಂತರದಲ್ಲಿ ಲಿವರ್ ಪರಿಪೂರ್ಣವಾಗಿ ಬೆಳೆದು ಮೊದಲಿನಂತೆ ಕಾರ್ಯ ಆರಂಭಿಸುತ್ತದೆ.

ಲಿವರ್ ದಾನಿಗಳಿಗೇ ಆಗ್ಲಿ.. ಲಿವರ್ ಪಡೆದುಕೊಳ್ಳೋ ರೋಗಿಗಳಿಗೇ ಆಗ್ಲಿ.. ಪ್ರಾಬ್ಲಂ ಇರೋದು ಕೊಡೋದ್ರಲ್ಲಿ, ತೆಗೆದುಕೊಳ್ಳೋದ್ರಲ್ಲಿಯಲ್ಲ. ಬದ್ಲಾಗಿ, ಕಸಿ ಮಾಡುವ ವೇಳೆ ಯಾವುದಾದ್ರು ಸೋಂಕು ತಗುಲಿದ್ರೆ ಇಬ್ಬರ ಪ್ರಾಣಕ್ಕೂ ಕುತ್ತು ಬರುತ್ತೆ. ಈ ಸೋಂಕುಗಳು ಹೇಗೆ ಬೇಕಾದ್ರೂ ತಗುಲಬಹುದು.ವ್ಯಕ್ತಿಯ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೂ ಸೋಂಕು ಅಟ್ಯಾಕ್ ಮಾಡಬಹುದು.

ಅರ್ಚನಾ ಕಾಮತ್‌ ಕುಟುಂಬದ ಆಪ್ತರು ಹೇಳೋ ಪ್ರಕಾರ ಲಿವರ್ ನೀಡಿದ್ದೇ ಅವರ ಸಾವಿಗೆ ನೇರವಾದ ಕಾರಣ ಅಲ್ಲ. ಇದಕ್ಕೆ ಬೇರೆ ಬೇರೆ ಆರೋಗ್ಯ ಸಂಬಂಧಿ ಸಮಸ್ಯೆಗಳೂ ಕಾರಣ ಆಗಿರಬಹುದು ಅಂತಾರೆ. ಬೇರೊಬ್ಬ ರೋಗಿಗೆ ಮರುಜನ್ಮ ಕೊಡಲು ಮಂದಾಗಿದ್ದ ಕರುಣಾಮಯಿ ಜೀವಕ್ಕೆ ಆ ನಿರ್ಧಾರವೇ ಮುಳುವಾಗಿರೋದು ನಿಜಕ್ಕೂ ದುರಂತ.

ಅರ್ಚನಾ ಕಾಮತ್‌ರಂತಾ ನಿಸ್ವಾರ್ಥ ಹೆಣ್ಣುಮಗಳ ಹಠಾತ್ ಸಾವು ನಿಜಕ್ಕೂ ಘೋರ. ಕೇವಲ ಕುಟುಂಬಕ್ಕಷ್ಟೇ ಅಲ್ಲ.. ಆಕೆಯನ್ನು ಹತ್ತಿರದಿಂದ ಕಂಡಿರೋ ಪ್ರತಿಯೊಬ್ಬರಿಗೂ ಬರಸಿಡಿಲು ಬಡಿದಂತಾಗಿದೆ.

Related Articles

Back to top button
error: Content is protected !!