ಜನಮನ

ಮಾನವೀಯ ನೆರವಿಗಾಗಿ ಮನವಿ

Views: 387

ಕುಂದಾಪುರ:ಶಂಕರ ನಾರಾಯಣ ಗ್ರಾಮದ ತಲಾರಿ ನಿವಾಸಿ ಲಕ್ಷ್ಮಣ ದೇವಾಡಿಗ ಯಾನೆ  ಬಾಬು ದೇವಾಡಿಗ ಇವರು ಜೀವನ ನಿರ್ವಹಣೆಗೆ ದಿನಕೂಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಮೂರು ತಿಂಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ವೈದ್ಯರಲ್ಲಿ ಪರೀಕ್ಷಿಸಿದಾಗ ಅವರಿಗೆ ಅಪರೂಪದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ (ಮೇದೋಜೀರಕ ಗ್ರಂಥಿಯ ಕ್ಯಾನ್ಸರ್) ಇಂದ ಬಳಲುತ್ತಿರುವುದು ಕಂಡುಬಂದಿದ್ದು, ವೈದ್ಯರು ಪೂರ್ಣ ಚಿಕಿತ್ಸೆಗೆ 10 ಲಕ್ಷಕ್ಕೂ ಹೆಚ್ಚು ಹಣ ಬೇಕಾಗಬಹುದು ಎಂದು ತಿಳಿಸಿದ್ದಾರೆ.

ಈಗಾಗಲೇ ಆಪರೇಷನ್ನಿಗಾಗಿ 5 ಲಕ್ಷಕ್ಕೂ ಅಧಿಕ ಖರ್ಚಾಗಿದ್ದು, ಸದ್ಯ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ ಕೀಮೋಥೆರಪಿ ಮತ್ತು ಇತರ ವೈದ್ಯಕೀಯ ಚಿಕಿತ್ಸೆಗೆ ಇನ್ನೂ 5 ಲಕ್ಷದ ಹಣ ಅಗತ್ಯವಿದೆ ಎಂದು ತಿಳಿದುಬಂದಿದೆ.

ಬಾಬು ದೇವಾಡಿಗ ಅವರು ಆರ್ಥಿಕವಾಗಿ ಹಿಂದುಳಿದಿದ್ದು ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದು.ಬರಸಿಡಿಲಿನಂತೆ ಬಂದಿರುವ ಈ ಸಮಸ್ಯೆಯಿಂದ ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಸಹೃದಯಿಗಳಾದ ತಾವು ತಮ್ಮ ಕೈಲಾದಷ್ಟು ಮಾನವೀಯ ನೆರವಿನ ನೀರಿಕ್ಷೆಯಲ್ಲಿರುವ ಅವರ ಬದುಕಿಗೆ ಆಸರೆಯಾಗಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

 

Related Articles

Back to top button
error: Content is protected !!