ಸಾಮಾಜಿಕ

ಪತ್ನಿಯ ತಲೆ ಕಡಿದು ಪೊಲೀಸ್ ಠಾಣೆಯತ್ತ ರುಂಡ ಕೈಯಲ್ಲಿ ಹಿಡಿದು ಬಂದ ಪತಿರಾಯ!

Views: 126

ಮಾಧೇಪುರ: ಪತ್ನಿಯ ಅಕ್ರಮ ಸಂಬಂದಿಂದ ಬೇಸತ್ತ ಪತಿಯೊಬ್ಬ, ಆಕೆಯ ಕತ್ತನ್ನು ಸೀಳಿ ರುಂಡವನ್ನು ಪೊಲೀಸ್ ಠಾಣೆಗೆ ತಂದ ಘಟನೆ ಬಿಹಾರದಲ್ಲಿ ನಡೆದಿದೆ.

ದಾರಿ ಮಧ್ಯೆ ಇದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಲಾಗಿದೆ. ಕೊಲೆಗಡುಕ ಪತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈ ಬಗ್ಗೆ ಶ್ರೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹದಿಂದ ಪತಿಯೇ ಪತ್ನಿಯ ತಲೆ ಕಡಿದು ಕೊಲೆ ಮಾಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶ್ರೀನಗರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ನಾರಾಯಣ್, ಪತ್ನಿಯನ್ನು ಕೊಂದ ಬಗ್ಗೆ ಪತಿ ತಪ್ಪೊಪ್ಪಿಕೊಂಡಿದ್ದಾನೆ. ಪತ್ನಿಯ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ. ಈ ಬಗ್ಗೆ ಪದೆ ಪದೇ ತಿಳಿ ಹೇಳಿದರೂ, ಸರಿದಾರಿಗೆ ಬಾರದ ಕಾರಣ, ಕೋಪದ ಭರದಲ್ಲಿ ಪತ್ನಿಯನ್ನು ಹರಿತವಾದ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾಗಿ ಆರೋಪಿ ತಿಳಿಸಿದ್ದಾನೆ ಎಂದರು.

ಪತ್ನಿಯ ರುಂಡವನ್ನು ತುಂಡರಿಸಿದ ಬಳಿಕ ಪತಿಯು ಅದನ್ನು ಠಾಣೆಗೆ ತರುತ್ತಿದ್ದ. ಮಾರ್ಗ ಮಧ್ಯೆ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲ್ಲಿಗೆ ಬಂದ ಆರಕ್ಷಕರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಮಾಧೇಪುರ ಸದರ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

 

Related Articles

Back to top button
error: Content is protected !!