HSRP ನಂಬರ್ ಪ್ಲೇಟ್ ಸೆ.15 ಅಂತಿಮ ಗಡುವು.. ವಾಹನ ಸವಾರರೇ ಬೇಗ ಅಲರ್ಟ್ ಆಗಿ..!

Views: 139
ಬೆಂಗಳೂರು: ವಾಹನ ಸವಾರರಿಗೆ ಮತ್ತೊಮ್ಮೆ ಬಿಗ್ ರಿಲೀಫ್ ಕೊಡುವ ಲೆಕ್ಕಾಚಾರದಲ್ಲಿ ಸಾರಿಗೆ ಇಲಾಖೆ ಇಲ್ಲ. ಸೆಪ್ಟೆಂಬರ್ 15ರೊಳಗೆ HSRP ನಂಬರ್ ಅಳವಡಿಸಿಕೊಂಡಿಲ್ಲ ಅಂದರೆ ಭಾರೀ ದಂಡ ಕಟ್ಟಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ.
2019 ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ವಾಹನಕ್ಕೆ HSRP ನಂಬರ್ ಪ್ಲೇಟ್ ಕಡ್ಡಾಯ ಆಗಿದೆ. ನಾಲ್ಕು ಬಾರಿ ಗಡುವು ನೀಡಿದ್ರೂ HSRP ಆಳವಡಿಸದ ವಾಹನ ಸವಾರರಿಗೆ ದಂಡದ ಬರೆ ಸಿಗಲಿದೆ.
ಇಲ್ಲಿಯವರಿಗೆ ಕೇವಲ 50 ಲಕ್ಷ ವಾಹನ ಸವಾರರು ಮಾತ್ರ HSRP ಆಳವಡಿಕೆ ಮಾಡಿಕೊಂಡಿದ್ದಾರೆ. ಇನ್ನೂ 1.4 ಕೋಟಿ ವಾಹನ ಸವಾರರುHSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕಿದೆ. ಈಗಾಗಲೇ ಮತ್ತೆ HSRP ಅಳವಡಿಕೆಗೆ ಗಡುವು ವಿಸ್ತರಣೆ ಮಾಡೋದಿಲ್ಲ ಎಂದು ಸಾರಿಗೆ ಇಲಾಖೆ ಹೇಳಿದೆ. ಮೊದಲ ಬಾರಿಗೆ 500 ರೂಪಾಯಿ ದಂಡ, ಎರಡನೇ ಬಾರಿ ಸಿಕ್ಕಿಬಿದ್ರೆ 1000 ದಂಡ ಹಾಕಲು ಸಾರಿಗೆ ಇಲಾಖೆ ಪ್ಲಾನ್ ಮಾಡಿದೆ.
ಕೇಂದ್ರ ಸರ್ಕಾರ ಇಡೀ ದೇಶದಲ್ಲೇ ಏಕ ಮಾದರಿಯ ನಂಬರ್ ಪ್ಲೇಟ್ ಇರಬೇಕೆಂಬ ದೃಷ್ಟಿಯಿಂದ ಮತ್ತು ಅಪರಾಧ ಕೃತ್ಯಗಳ ಬಗ್ಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ನಿಂದ ಮಾಹಿತಿ ಸಿಗಲಿದೆ ಎಂಬ ಉದ್ದೇಶದಿಂದ ಹೆಚ್‌ಎಸ್‌ಆರ್‌ಪಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಇದನ್ನು ಜನ ಇನ್ನೂ ತಮ್ಮ ವಾಹನಗಳಿಗೆ ಹಾಕಿಸಿಕೊಳ್ಳದೇ ಸುಮ್ಮನೇ ಇದ್ದು ಕೊನೇ ಗಳಿಗೆಯಲ್ಲಿ ಆನ್‌ಲೈನ್‌ನಲ್ಲಿ ಬುಕ್ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಒಂದು ವಾರ ಕಾಲಾವಕಾಶ ಇದೆ.ಬಳಿಕ ನಾವು ದಂಡ ಹಾಕುತ್ತೇವೆ. ಜೊತೆಗೆ ಸಂಚಾರ ಪೊಲೀಸರು ದಂಡ ಹಾಕಲಿದ್ದಾರೆ ಎಂದು ಸಾರಿಗೆ ಇಲಾಖೆ ತಿಳಿಸಿದೆ






