ಜನಮನ

ಹಾವೇರಿ: ಬೆಳಗಿನ ಜಾವ ಮನೆ ಕುಸಿದು ಬಿದ್ದು ಮೂವರು ಸಾವು 

Views: 85

ಹಾವೇರಿ: ಬೆಳಗಿನ ಜಾವ ಮನೆ ಕುಸಿದು ಬಿದ್ದು ಮೂವರು ಸಾವು

ಹಾವೇರಿ: ನಿರಂತರ ಮಳೆಗೆ ಮನೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವಣೂರಿನ ಮಾದಾಪುರ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಮೃತರನ್ನು  ಚನ್ನಮ್ಮ(30) ಹಾಗು 2 ವರ್ಷದ ಅವಳಿ ಮಕ್ಕಳಾದ ಅಮೂಲ್ಯ ಮತ್ತು ಅನುಶ್ರೀ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ.

 

Related Articles

Back to top button
error: Content is protected !!