
Views: 288
ಕುಂದಾಪುರ: ಅಸೋಡು ಶ್ರೀ ಬೆಂಕಿಕಾನ್ ನಂದಿಕೇಶ್ವರ ನೂತನ ಭಜನಾ ಮಂಡಳಿಯ ಉದ್ಘಾಟನಾ ಸಮಾರಂಭವು ದಿನಾಂಕ 21.07.024ನೇ ಭಾನುವಾರ ಬೆಳಿಗ್ಗೆ 9:30ಕ್ಕೆ ದೇವಾಲಯದ ವಠಾರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀ ರಮಣ ಉಪಾಧ್ಯಾಯ ಉದ್ಘಾಟಿಸಲಿದ್ದಾರೆ.
ಅಸೋಡು ನಿವೃತ್ತ ಸಹಾಯಕ ವಿದ್ಯಾಧಿಕಾರಿಗಳು ಶ್ರೀ ಕೆ.ರಾಜೀವ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಸೋಡು ಬೆಂಕಿಕಾನ್ ನಂದಿಕೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಅಜಿತ್ ಕುಮಾರ್ ಶೆಟ್ಟಿ, ಅಸೋಡು ಶ್ರೀ ದಯಾನಂದ ಹೆಗ್ಡೆ ,ಅಸೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ರವಿರಾಜ್ ಶೆಟ್ಟಿ, ಸಮಾಜ ಸೇವಕರಾದ ಮಲ್ಯಾಡಿ ಶ್ರೀ ಶಿವರಾಮ ಶೆಟ್ಟಿ, ಕಾಳಾವರ ಗ್ರಾಮ ಪಂಚಾಯತ್ ಸದಸ್ಯ ಶ್ರೀ ರಘುರಾಮ್ ಶೆಟ್ಟಿ, ಕಾಳಾವರ ಗ್ರಾಮ ಪಂಚಾಯತ್ ಸದಸ್ಯ ಶ್ರೀ ಚಂದ್ರ ಪೂಜಾರಿ, ಕಾಳಾವರ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಪಾರ್ವತಿ ಶೇರಿಗಾರ್, ನಂದಿಕೇಶ್ವರ ಯುವಕ ಮಂಡಲ ಅಧ್ಯಕ್ಷ ಶ್ರೀ ಉಮೇಶ್ ಪೂಜಾರಿ, ಅಸೋಡು ನಂದಿಕೇಶ್ವರ ದೇವಳದ ಅರ್ಚಕ ಶ್ರೀ ವೆಂಕಟರಮಣ ಹೆಬ್ಬಾರ್, ಕುಂದಾಪುರ ತಾಲೂಕು ಭಜನಾ ಮಂಡಳಿಯ ಗೌರವಾಧ್ಯಕ್ಷ ಶ್ರೀ ಜಯಕರ ಪೂಜಾರಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10.30 ರಿಂದ ಆಯ್ದ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






