ಜನಮನ

ಒಂದು ಬಾರಿ ಹಾವು ಕಚ್ಚಿದ್ದಕ್ಕೆ ಸಿಟ್ಟಿಗೆದ್ದ ಯುವಕ ಮೂರು ಬಾರಿ ಹಾವಿಗೆ ಕಚ್ಚಿದ !..ಬದುಕಿ ಉಳಿದವರು ಯಾರು?

Views: 227

ಬಿಹಾರದಲ್ಲೊಬ್ಬ ವ್ಯಕ್ತಿಗೆ ಕಚ್ಚಿದ ಹಾವಿಗೆ ವಾಪಸ್‌ ಮೂರು ಬಾರಿ ಕಚ್ಚಿದ್ದಾನೆ.ಅದೃಷ್ಟ ಎಂಬುವಂತೆ  ಹಾವು ಕಚ್ಚಿಸಿಕೊಂಡ ವ್ಯಕ್ತಿಯು ಬದುಕುಳಿದರೆ, ಈತನಿಂದ ಕಚ್ಚಿಸಿಕೊಂಡ ಹಾವು ಸತ್ತುಹೋದ ಘಟನೆ ನಡೆದಿದೆ.

ಬಿಹಾರದ ರಾಜೌಲಿ ಪ್ರದೇಶದಲ್ಲಿ ಇಂತಹದ್ದೊಂದು ವಿಸ್ಮಯಕಾರಿ ಘಟನೆ ನಡೆದಿದೆ. ಜಾರ್ಖಂಡ್‌ ಮೂಲದ ಸಂತೋಷ್‌ ಲೋಹರ್‌ ಎಂಬ ವ್ಯಕ್ತಿಯು ರೈಲ್ವೆ ಲೈನ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಈತನ ದಿನದ ಕೆಲಸ ಮುಗಿಸಿ ರೌಜಲಿಯಲ್ಲಿರುವ ಕ್ಯಾಂಪ್‌ನಲ್ಲಿ ಮಲಗಿದ್ದಾನೆ. ಇದೇ ವೇಳೆ ಹಾವೊಂದು ಸಂತೋಷ್‌ ಲೋಹರ್‌ಗೆ ಕಚ್ಚಿದೆ. ಹಾವು ಕಚ್ಚಿದ ಬಳಿಕ ಗಾಬರಿಯಾಗದ, ಆಸ್ಪತ್ರೆಗೆ ಓಡದ ಈತನು ಕಬ್ಬಿಣದ ರಾಡ್‌ನಿಂದ ಹಾವನ್ನು ಹಿಡಿದು, ಅದಕ್ಕೇ ಮೂರು ಬಾರಿ ಕಚ್ಚಿದ್ದಾನೆ. ಈತನು ಕಚ್ಚಿದ ತೀವ್ರತೆಗೆ ಹಾವೇ ಸತ್ತುಹೋಗಿದೆ.

ಸಂತೋಷ್‌ ಲೋಹರ್‌ನನ್ನು ಕೂಡಲೇ ಆತನ ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಈತನು ಬಹುತೇಕ ಗುಣಮುಖನಾಗಿದ್ದಾನೆ. “ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ ಕಾರಣ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಎಂದು ಚಿಕಿತ್ಸೆ ನೀಡಿದ ವೈದ್ಯರು ಮಾಹಿತಿ ನೀಡಿದ್ದಾರೆ. ಈತನ ಸಾಹಸವನ್ನು ಕೇಳಿದ ಸುತ್ತಮುತ್ತಲಿನ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

 

Related Articles

Back to top button
error: Content is protected !!