ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಅವ್ಯವಹಾರ: ನ್ಯಾಯಾಲಯ ಮೊರೆ ಹೋದ ಉದ್ಯೋಗ ವಂಚಿತರು

Views: 131
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ. ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಹಗರಣದ ಕುರಿತು ಅಭ್ಯರ್ಥಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಲ್ಲಿ ಕಳೆದ ವರ್ಷ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಿತು. ಬಿಜೆಪಿ ಸರಕಾರದ ಅವಧಿಯಲ್ಲಿ ಈ ನೇಮಕಾತಿ ನಡೆದಿತ್ತು. ಈಗ ಸರಕಾರ ಬದಲಾಗಿದೆ. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿದೆ. ಕಳೆದ ವರ್ಷ 100ಕ್ಕೂ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿ ನಡೆದಿತ್ತು. ಈ ನೇಮಕಾತಿಯಲ್ಲಿ ದೊಡ್ಡ ಮಟ್ಟದ. ಅವ್ಯವಹಾರ ನಡೆದಿರುವ ಕುರಿತು ಪರೀಕ್ಷೆ ಬರೆದ ಉದ್ಯೋಗ ಆಕಾಂಕ್ಷಿಗಳು ಆರೋಪ ಮಾಡಿದ್ದರು. ಅಂದಿನ ಆಡಳಿತ ಮಂಡಳಿಯು ನಿಯಮಗಳನ್ನು ಗಾಳಿಗೆ ತೂರಿ ನೇಮಕಾತಿಯನ್ನು ಮಾಡಿತ್ತು. ಈ ನೇಮಕಾತಿ ಕುರಿತು ಉದ್ಯೋಗ ಆಕಾಂಕ್ಷಿಯೊಬ್ಬರು ಕೋರ್ಟ್ ಮೆಟ್ಟಿಲು ಏರಿದ್ದಾರೆ
ಈ ನಡುವೆ ಅನಧಿಕೃತ ವಿವಿಗೆ ಪರೀಕ್ಷೆ ನಡೆಸಲು ಸುಮಾರು 40 ಲಕ್ಷ ರೂ. ಹಣ ನೀಡಿತ್ತು. ಈ ವಿವಿಗೆ ಪರೀಕ್ಷೆ ನಡೆಸುವ ಕುರಿತು ಆಡಳಿತ ಮಂಡಳಿ ಮತ್ತು ಅಪೇಕ್ಸ್ ಬ್ಯಾಂಕ್ ನ ಸಲಹೆಯನ್ನು ಪಡೆದಿರಲಿಲ್ಲ. ಇನ್ನೂ ಕಳೆದ ವರ್ಷ ಲಿಖಿತ ಪರೀಕ್ಷೆ ಬಳಿಕ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡದೇ ವಾಪಸ್ ಪಡೆಯುವ ಮೂಲಕ ಗೊಂದಲ ಮೂಡಿಸಿತ್ತು. ವಿವಿಧ ಹುದ್ದೆಗಳ ಆಯ್ಕೆ ಸಂದರ್ಭದಲ್ಲಿ ನೇರ ಸಂದರ್ಶನದಲ್ಲೂ ತಾರತಮ್ಯ ಮಾಡಿದೆ. ತಮಗೆ ಬೇಕಾಗಿರುವ ಅಭ್ಯರ್ಥಿಗಳಿಗೆ ಮಾತ್ರ ನೇರ ಸಂದರ್ಶನ ಬರಲು ಸೂಚನೆ ನೀಡಿದ್ದರಂತೆ. ಯಾರೆಲ್ಲ ಹಣ ನೀಡಿದ್ದಾರೆ ಅವರಿಗೆ ಮಾತ್ರ ಬ್ಯಾಂಕ್ ನಲ್ಲಿ ಉದ್ಯೋಗ ಸಿಕ್ಕಿದೆ ಎನ್ನುವುದು ಒಂದಿಷ್ಟು ಪರೀಕ್ಷೆ ಬರೆದ ಅಭ್ಯರ್ಥಿಗಳ ಆರೋಪವಾಗಿದೆ.
ಡಿಸಿಸಿ ಬ್ಯಾಂಕ್ ನಲ್ಲಿ ನೇಮಕಾತಿ ಹೆಸರಿನಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ. ನೇಮಕಾತಿಯಲ್ಲಿ ಆಯ್ಕೆ ಆದ ಉದ್ಯೋಗಿಗಳಿಗೆ ಗೌಪ್ಯವಾಗಿ ಸಂದರ್ಶನ ಬಳಿಕ ಆದೇಶವನ್ನು ನೀಡಿದೆ. ಹೀಗೆ ಪರೀಕ್ಷೆ ಬರೆದ ಒಂದಿಷ್ಟು ಅಭ್ಯರ್ಥಿಗಳಿಗೆ ನೇಮಕಾತಿ ಮೊದಲೇ ಬ್ಯಾಂಕ್ ನಲ್ಲಿ ಉದ್ಯೋಗಿಗಳೆಂದು ಲಕ್ಷ ಲಕ್ಷ ರೂ. ವೈಯಕ್ತಿ ಸಾಲ ನೀಡಿದ್ದಾರೆ. ಇದೇ ಸಾಲದ ಹಣವು ಬ್ಯಾಂಕ್ ನ ಆಡಳಿತ ಮಂಡಳಿಯ ಹಲವರಿಗೆ ಸೇರಿದೆ ಅಂತೆ.
ಬ್ಯಾಂಕ್ ನಲ್ಲಿ ನೇಮಕಾತಿ ಮತ್ತು ವೇತನ ಪರಿಷ್ಕರಣೆ ಹಾಗೂ ತುಟ್ಟಿ ಭತ್ಯೆ ಹಣದಲ್ಲೂ ದೊಡ್ಡ ಮಟ್ಟದ ಗೋಲ್ ಮಾಲ್ ನಡೆದಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಕಾಂಗ್ರೆಸ್ ಮುಖಂಡರ ಆಯನೂರು ಮಂಜುನಾಥ್ ಸರಕಾರಕ್ಕೆ ಒತ್ತಾಯಿಸಿದ್ದಾರೆ.






